ಕಲ್ಲಡ್ಕ : ಕಳೆದ ಹಲವು ದಿನಗಳಿಂದ ಕಲ್ಲಡ್ಕದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕಾರಣಗಳು ಏನು ? ಅದಕ್ಕೆ ಕಾರಣೀಕರ್ತರು ಯಾರು? ಈ ಘಟನೆಯಿಂದ ಅನೇಕರ ಆಸ್ತಿ ಪಾಸ್ತಿ ಹಾನಿಯಾಗಿದೆ ಇದ್ದಕ್ಕೆಲ್ಲಾ ಯಾರು ಹೊಣೆ? ನಿಜವಾದ ತಪ್ಪಿತಸ್ಥರನ್ನು ಹೊರಗಿಟ್ಟು ಅಮಾಯಕರ ಮೇಲೆ ಎಲ್ಲಾ ತಪ್ಪನ್ನು ಹೊರಿಸಿ ಪ್ರಕರಣದ ದಿಕ್ಕು ತಪ್ಪಿಸುತ್ತಿರುವುದರ ಹಿಂದೆ ಯಾರ ಕೈ ವಾಡವಿದೆ? ಎನ್ನುವುದಕ್ಕೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ದಿನಾಂಕ 14-6-2017 ರಂದು ಮನವಿಯ ಮೂಲಕ ಎಸ್. ಪಿ.ಯವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಒತ್ತಾಯಿಸಿದ್ದಾರೆ. ಸಂಸದರೊಂದಿಗೆ ಉ.ಕ. ಸಂಸದ ಅನಂತ ಕುಮಾರ್ ಹೆಗಡೆ, ಮೋನಪ್ಪ ಬಂಡಾರಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹಾಗೂ ಇನ್ನಿತರ ಭಾಜಪ ನಾಯಕರು ಭಾಗಿಯಾಗಿದ್ದರು.