ಮಂಗಳೂರು ವಿಧಾನಸಭಾ ಕ್ಷೇತ್ರದ ಕುರ್ನಾಡು ಶಕ್ತಿಕೇಂದ್ರದ ಬೃಹತ್ ಸಾರ್ವಜನಿಕ ಸಭೆ ಮುಡಿಪು ಜಂಕ್ಷನ್ನಲ್ಲಿ ನಡೆಯಿತು. ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಮಂಡಲಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳ್ಯಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿಶಂಕರ್ ಮಿಜಾರ್, ಮಾಜೀ ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಬದ್ರಿನಾಥ್ ಕಾಮತ್, ರವೀಂದ್ರ ಶೆಟ್ಟಿ ಉಳಿದೋಟ್ಟು, ಚಂದ್ರಹಾಸ ಉಳ್ಳಾಲ್, ಸತೀಶ್ ಕುಂಪಲ, ಧನಲಕ್ಷ್ಮೀ ಗಟ್ಟಿ, ಜಯರಾಮ್ ಶೆಟ್ಟಿ, ಸೀತಾರಾಮ್ ಶೆಟ್ಟಿ, ಕೆ.ಟಿ ಸುವರ್ಣ, ಭಾಸ್ಕರ್ ದೇವಸ್ಯ ಮೋಹನ್ ರಾಜ್ ಕೋಟೆಕಾರ್ ಇನ್ನಿತರ ನಾಯಕರು ಹಾಗೂ ಬೃಹತ್ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.