Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಕುಳಾಯಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ ರೂ. 196 ಕೋಟಿ ಅನುದಾನ ಬಿಡುಗಡೆ

ದೆಹಲಿ : ಸಂಸದ ನಳಿನ್ ಕುಮಾರ್ ಕಟೀಲ್ ಇವರ ನೇತೃತ್ವದಲ್ಲಿ ಮೀನುಗಾರಿಕಾ ರಂಗದ ಪದಾಧಿಕಾರಿಗಳ ನಿಯೋಗವು ಸ್ಥಗಿತಗೊಂಡಿರುವ ಮಂಗಳೂರು ಮೀನುಗಾರಿಕಾ ಬಂದರಿನ 3ನೇ ಹಂತದ ಯೋಜನೆಗೆ ರೂ. 32.20 ಕೋಟಿ ಅನುದಾನವನ್ನು ಕೇಂದ್ರ ಸರಕಾರದಿಂದ ಬಿಡುಗಡೆ ಮಾಡುವಂತೆ ಕೇಂದ್ರ ಕೃಷಿ ಸಚಿವರಾದ ರಾಧಾಮೋಹನ್ ಸಿಂಗ್ ಅವರನ್ನು ದಿನಾಂಕ :08-08-2017 ರಂದು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

Kulayi bandaru manavi

ನಿಯೋಗದಲ್ಲಿ ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷರಾದ ನಿತಿನ್ ಕುಮಾರ್, ಕರ್ನಾಟಕ ಪರ್ಸಿನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷರಾದ ಮೋಹನ್ ಬೆಂಗ್ರೆ, ಕರ್ನಾಟಕ ಕರಾವಳಿ ಮೀನುಗಾರರ ಕ್ರೀಯಾ ಸಂಘದ ಅಧ್ಯಕ್ಷರಾದ ಮನೋಹರ್ ಬೋಳೂರು, ಮೀನುಗಾರ ಪ್ರಮುಖರಾದ ಅನಿಲ್ ಕುಮಾರ್, ಇಬ್ರಾಹಿಂ ಬೆಂಗ್ರೆ, ನವೀನ್ ಬಂಗೇರ, ಬಾಬು ಉಳ್ಳಾಲ್, ದಯಾನಂದ ಇವರು ಉಪಸ್ಥಿತರಿದ್ದರು.

ಇದಲ್ಲದೇ ಸಂಸದ ನಳಿನ್ ಕುಮಾರ್ ಕಟೀಲ್ ಇವರ ಸತತ ಪ್ರಯತ್ನದ ಫಲವಾಗಿ ನವಮಂಗಳೂರು ಮೀನುಗಾರಿಕಾ ಬಂದರಿನ ನಿರ್ವಸಿತರ ಬಹುಕಾಲದ ಬೇಡಿಕೆಯಾಗಿದ್ದ ಕುಳಾಯಿ ಮೀನುಗಾರಿಕಾ ಬಂದರು ನಿರ್ಮಾಣ ಯೋಜನೆಗೆ ಕೇಂದ್ರ ಸರಕಾರವು ಅನುಮೋದನೆ ನೀಡಿ ರೂ.196.00 ಕೋಟಿ ಅನುದಾನ ಬಿಡುಗಡೆಗೊಳಿಸಿದೆ.

Highslide for Wordpress Plugin