ಸಂಸದ ನಳಿನ್ ಕುಮಾರ್ ಕಟೀಲ್ ಇವರು ಕೇಂದ್ರ ಪ್ರವಾಸೋದ್ಯಮ ಸಚಿವ ಡಾ||ಮಹೇಶ್ ಶರ್ಮಾ ಇವರನ್ನು ಭೇಟಿಯಾಗಿ ಸುಳ್ಯ ತಾಲೂಕು ಬಳ್ಪ ಗ್ರಾಮದ ಸುಮಾರು 1200 ವರ್ಷಗಳಷ್ಟು ಪುರಾತನ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಪ್ರವಾಸೋದ್ಯಮದಡಿಯಲ್ಲಿ ಅಭಿವೃದ್ಧಿಗೊಳಿಸಲು ಅನುದಾನವನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು.