Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ : ಪುತ್ತೂರಿನಲ್ಲಿ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಪುತ್ತೂರು : ಮಂಗಳೂರು ಐ.ಜಿ.ಪಿ. ಕಚೇರಿಯಲ್ಲಿ ಡಿ.ವೈ.ಎಸ್.ಪಿ.ಯಾಗಿ ಸೇವೆ ಸಲ್ಲಿಸುತ್ತಿದ್ದ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂ.ಕೆ. ಗಣಪತಿಯವರು ಆತ್ಮಹತ್ಯೆಗೆ ಶರಣಾಗಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಕೆ.ಜೆ. ಜಾರ್ಜ್­ರವರು ರಾಜೀನಾಮೆ ಕೊಡಬೇಕು ಮತ್ತು ಡಿ.ವೈ.ಎಸ್.ಪಿ ಎಂ.ಕೆ. ಗಣಪತಿಯರು ಹೇಳಿದ ಅಧಿಕಾರಿಗಳಿಗೆ ಶಿಕ್ಷೆಯನ್ನು ನೀಡಬೇಕು ಎಂದು ಒತ್ತಾಯಿಸಿ ಪುತ್ತೂರು ಮಿನಿ ವಿಧಾನಸೌಧದ ಎದುರು ಭಾರತೀಯ ಜನತಾ ಪಾರ್ಟಿಯ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಬ್ರಹತ್ ಪ್ರತಿಭಟನೆಯನ್ನು ಶನಿವಾರ ಜುಲೈ 9 ರಂದು ನಡೆಸಲಾಯಿತು.

WhatsApp-Image-20160709

WhatsApp-Image-20160709-(4)

WhatsApp-Image-20160709-(1)

WhatsApp-Image-20160709-(2)

WhatsApp-Image-20160709-(5)

WhatsApp-Image-20160709-(6)

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಂಸದ ನಳಿನ ಕುಮಾರ್ ಕಟೀಲ್­ರವರು ಮಾತನಾಡಿ ಡಿವೈಎಸ್‌ಪಿ ಎಂ.ಕೆ. ಗಣಪತಿಯವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅವರ ಆತ್ಮಹತ್ಯೆ ಹಿಂದೆ ಹಲವರು ಇರುವ ಹಿನ್ನೆಲೆಯಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಡಿವೈಎಸ್‌ಪಿ ಎಂ.ಕೆ.  ಗಣಪತಿಯವರ ಸಾವಿಗೆ ನ್ಯಾಯ ಕೊಡಿಸಿ ಅವರ ಮನೆಯವರಿಗೆ ರಕ್ಷಣೆ ಕೊಡಬೇಕು. ಇಲ್ಲವೆಂದದಾರೆ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಡಿವೈಎಸ್‌ಪಿ ಎಂ.ಕೆ. ಗಣಪತಿಯವರ ಸಾವಿಗೆ ನ್ಯಾಯ ಒದಗಿಸುವುದು ಹೇಗೆ ಎಂದು  ಗೊತ್ತಿದೆ ಮತ್ತು ಅವರ ಮನೆಯವರಿಗೂ ರಕ್ಷಣೆಯನ್ನು ಮಾಡುತ್ತೇವೆ ಎಂದು ರಾಜ್ಯ ಸರ್ಕಾರದ ಅಸ್ತಿತ್ವವನ್ನು ಪ್ರಶ್ನಿಸಿದರು.

ದ.ಕ. ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸಂಜೀವ ಮಠಂದೂರುರವರು ಮಾತನಾಡಿ ಸಿದ್ದರಾಮಯ್ಯನವರು ಕರ್ನಾಟಕದಲ್ಲಿ ಇರುವುದು ಹೌದೇ ಎಂದೆನ್ನಿಸುತ್ತಿದೆ. ಗೂಂಡಾ ಸರಕಾರವಿದ್ದು ಪೊಲೀಸ್ ಇಲಾಖೆಗೆ ರಕ್ಷಣೆ ಮಾಡಲು ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇನ್ನು ಜನಸಾಮಾನ್ಯರಿಗೆ ಹೇಗೆ ರಕ್ಷಣೆ ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯನವರ ಸರಕಾರದ ಗೂಂಡಾ ಪ್ರವೃತ್ತಿ ನಿಲ್ಲಿಸಬೇಕು. ಇಲ್ಲವಾದರೆ ಭಾರತಿಯ ಜನತಾ ಪಾರ್ಟಿ ಸೇರಿದಂತೆ ಕರ್ನಾಟಕದ ಅರು ಕೋಟಿ ಜನರು ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದು ಎಚ್ಚರಿಸಿದರು.

ಕೇಶವ ಬಜತ್ತೂರುರವರು ಪ್ರಸ್ತಾವನೆ ಮಾಡಿದರು. ಶಂಭು ಭಟ್ ಸ್ವಾಗತ, ಜೀವಂದರ ಜೈನ್ ಧನ್ಯವಾದಗಳನ್ನು ಸಮರ್ಪಿಸಿದರು. ರಾಜೇಶ್ ಬನ್ನುರುರವರು ಕಾರ್ಯಕ್ರಮ ನಿರೂಪಣೆ ಮಾಡಿದರು.

Highslide for Wordpress Plugin