Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

‘ದಬಕ್ ದಬಾ ಐಸಾ’ ಪೈರಸಿ ಪ್ರಕರಣ ತನಿಖೆಗೆ ಸಂಸದರ ಆಗ್ರಹ

Dabak

ಮಂಗಳೂರು: ಬೆಳೆಯುತ್ತಿರುವ ತುಳು ಚಿತ್ರರಂಗದಲ್ಲಿ ಪೈರಸಿ ಪ್ರಕರಣ ಬೆಳಕಿಗೆ ಬಂದಿರುವುದು ಅತ್ಯಂತ ಆತಂಕದ ವಿಷಯವಾಗಿದೆ. ದಬಕ್ ದಬಾ ಐಸಾ ತುಳು ಚಿತ್ರ ಬಿಡುಗಡೆಗೆ ಮೊದಲೇ ಪೈರಸಿ ರೂಪದಲ್ಲಿ ಹೊರ ಬಂದಿರುವ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಂಸದ ನಳಿನ್ ಕಮಾರ್ ಕಟೀಲ್ ಆಗ್ರಹಿಸಿದ್ದಾರೆ.

ತುಳು ಸಂಸ್ಕೃತಿ, ಭಾಷೆಯ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿರುವ ತುಳು ಚಿತ್ರ ರಂಗಕ್ಕೆ ಇಂತಹ ಆಪತ್ತು ಬರುವುದು ಆತಂಕದ ವಿಚಾರವಾಗಿದೆ. ಇಂತಹ ಪ್ರವೃತ್ತಿಯನ್ನು ಆರಂಭದಲ್ಲಿಯೇ ನಿಲ್ಲಿಸಲು ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಸಂಸದರ ಪ್ರಕಟಣೆ ತಿಳಿಸಿದೆ.

Highslide for Wordpress Plugin