ಬಂಟ್ವಾಳ: ಕಾರ್ಯಕರ್ತರು ಸಂಸ್ಕಾರಯುತವಾಗಿ ಬೆಳೆದಾಗ ದೇಶದ ಪರಿವರ್ತನೆ, ಜಗತ್ತು ಎತ್ತರಕ್ಕೆ ಏರಲು, ಆರ್ಥಿಕ ಕ್ರೋಢೀಕರಣಕ್ಕೆ ಸಾಧ್ಯ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಬಂಟ್ವಾಳ ವೆಂಕಟರಮಣ ಸ್ವಾಮೀ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ, ಬಂಟ್ವಾಳ ಮಂಡಲ ಪಂ.ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ, ಮಂಡಲ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕರ್ತರಿಗೆ ಸರಿಯಾದ ಶಿಕ್ಷಣ ಸಿಕ್ಕಾಗ ಮಾತ್ರ ಇದು ಸಾದ್ಯ ಎಂದರು. ವ್ಯಕ್ತಿ ವ್ಯಕ್ತಿಯನ್ನು ಬೆಳೆಸುವ, ಸಿದ್ದಾಂತ ವೈಚಾರಿಕತೆ ಆಧಾರದಲ್ಲಿ ಕಾರ್ಯಕರ್ತರ ನಾಯಕತ್ವವನ್ನು ಹಂತ ಹಂತವಾಗಿ ಬೆಳೆಸುವ ಕೆಲಸವನ್ನು ಇಲ್ಲಿ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣ ಪ್ರಕೋಪದ ವರ್ಗ ಪ್ರಮುಖ ಮಹಾಬಲ ಶೆಟ್ಟಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ನಾಗರಾಜ ಶೆಟ್ಟಿ, ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಸುಲೋಚನ ಭಟ್ಟ್, ತುಂಗಪ್ಪ ಬಂಗೇರ ದೇವದಾಸ ಶೆಟ್ಟಿ, ದಿನೇಶ್ ಭಂಡಾರಿ ಮೋನಪ್ಪ ಭಂಡಾರಿ ಮತ್ತು ನಳಿನಿ ಬಿ.ಶೆಟ್ಟಿ ಮತ್ತಿತತರು ಉಪಸ್ಥಿತರಿದ್ದರು. ಬಂಟ್ವಾಳ ಬಿ.ಜೆ.ಪಿ ಅಧ್ಯಕ್ಷ ಜಿ.ಆನಂದ ಸ್ವಾಗತಿಸಿ ಪ್ರಶಿಕ್ಷಣ ಪ್ರಕೋಪದ ಮಂಡಲ ಸಂಚಾಲಕ ವಂದಿಸಿದರು.