Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಬೆಳಂದೂರು ಜಿ.ಪಂ. ಉಪ ಚುನಾವಣೆ – ಸವಣೂರಿನಲ್ಲಿ ಬಹಿರಂಗ ಪ್ರಚಾರ ಸಭೆ

ಪಾಲ್ತಾಡಿ : ಬೆಳಂದೂರು ಜಿ.ಪಂ.ಕ್ಷೇತ್ರದ ಸದಸ್ಯೆ ಸಾವಿತ್ರಿ ಶಿವರಾಂ ನಿಧನದಿಂದ ತೆರವಾದ ಸ್ಥಾನಕ್ಕೆ ಫೆ.1 ರಂದು ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ಪಕ್ಷದ ಬಹಿರಂಗ ಪ್ರಚಾರ ಸಭೆ ಸವಣೂರಿನಲ್ಲಿ ಜ.30 ರಂದು ಸಂಜೆ ನಡೆಯಿತು.

ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕರ್ನಾಟಕ ಸರಕಾರದ ವಿರೋಧ ಪಕ್ಷದ ಮುಖ್ಯ ಸಚೇತಕ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಆಡಳಿತವಿರುವ ಕಾಂಗ್ರೇಸ್ ಸರಕಾರ ಜನರಿಗೆ ವಿಶೇಷವಾದ ಭರವಸೆ ನೀಡಿತ್ತು. ಬಡವರ ಪರ, ಜನಪರ ಆಡಳಿತ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ ಸರಕಾರ ಯಾವುದೇ ಜನಪರ ಆಡಳಿತ ನಡೆಸದೇ ಜನವಿರೋಧಿ ನೀತಿ ಅನುಸರಿಸುತ್ತಿದೆ. ಪಡಿತರ ಚೀಟಿ ಸಮಸ್ಯೆಯಾಗಿ ಪರಿಣಮಿಸಿದೆ. ಬಡವರಿಗೆ ಸಿಗಬೇಕಾದ ಪಡಿತರ ಅಕ್ಕಿ, ಸೀಮೆಎಣ್ಣೆಯನ್ನು ಕಿತ್ತುಕೊಂಡಿದೆ.ಬಿಜೆಪಿ ನೇತೃತ್ವದ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಗ್ರಾ.ಪಂ.ಗೆ ನೂರು ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕಾಂಗ್ರೇಸ್ ಸರಕಾರ ಆಡಳಿತಕ್ಕೆ ಬಂದ ನಂತರ ಅದನ್ನು ಕೇವಲ ೨೦ ಮನೆಗಳಿಗೆ ಇಳಿಸುವ ಮೂಲಕ ಜನತೆಗೆ ದ್ರೋಹ ಬಗೆದಿದೆ. ಕಳೆದ ಹತ್ತು ತಿಂಗಳಿನಿಂದ ಗ್ರಾ.ಪಂ.ಗಳಿಗೆ ಅನುದಾನ ಮಂಜೂರು ಮಾಡದೇ ಗ್ರಾ.ಪಂ.ನಲ್ಲಿ ಯಾವುದೇ ಅಭಿವೃದ್ದಿ ಕಾರ್ಯಮಾಡದಂತೆ ತಡೆಯೊಡ್ಡಿದೆ.

3

ಗೋಹತ್ಯೆ ನಿಷೇದದ ಕುರಿತು ಸರಕಾರ ಸಂಪೂರ್ಣ ವಿಫಲವಾಗಿದೆ. ಆ ಮೂಲಕ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಇವುಗಳಿಗೆ ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ, ರಾಜ್ಯ ಸರಕಾರದ ಜನವಿರೋಧಿ ನೀತಿಗೆ ಬೇಸತ್ತ ಸರಕಾರದ ಸಚಿವರೇ ರಾಜಿನಾಮೆಗೆ ಮುಂದಾಗಿದ್ದಾರೆ. ಯಾವ ಸಮಯದಲ್ಲೂ ಕೂಡ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಜನತೆಯ ತೀರ್ಪು ಯಾವ ರೀತಿ ಇದೆಯೆಂಬುದು ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಕಾಂಗ್ರೇಸ್ ನೇತೃತ್ವದ ಯುಪಿಎ ಸರಕಾರದ ಜನವಿರೋಧಿ ನೀತಿ, ಭ್ರಷ್ಟಾಚಾರ, ದುರಾಡಳಿತದ ವಿರುದ್ದ ಮತಚಲಾಯಿಸಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದ ನಂತರ ದೇಶಕ್ಕೆ ಹೊಸಬೆಳಕು ಮೂಡಿದೆ. ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾರನ್ನೇ ದೇಶದ ಗಣರಾಜ್ಯೋತ್ಸವ ಸಮಾರಂಭಕ್ಕೆ ಬರಮಾಡಿಕೊಳ್ಳುವ ಮೂಲಕ ಹೊಸಭಾಷ್ಯ ಬರೆದಿದ್ದಾರೆ. ಇದು ದೇಶದ ಇತಿಹಾಸದಲ್ಲಿಯೇ ಪ್ರಥಮ. ಸ್ವಚ್ಚ ಭಾರತ, ಜನಧನ ಯೋಜನೆ , ಪೆಟ್ರೋಲ್-ಡೀಸೆಲ್ ಬೆಲೆ ಗಮನಾರ್ಹವಾಗಿ ಇಳಿಕೆ ಮಾಡುವ ಮೂಲಕ ಅತ್ಯಲ್ಪ ಸಮಯದಲ್ಲೇ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದರು.

ದ.ಕ.ಜಿ.ಪಂ.ಆಡಳಿತ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಎರಡು ಬಾರಿ ಕೇಂದ್ರಸರಕಾರದಿಂದ ಪುರಸ್ಕಾರ ದೊರೆತಿದ್ದು, ಬಿಜೆಪಿ ನೇತೃತ್ವದ ಸರಕಾರದ ಜನಪರ ನೀತಿಗೆ ಹಿಡಿದ ಕೈಗನ್ನಡಿ ಎಂದರು.

ಸುಳ್ಯ ಶಾಸಕ ಎಸ್ ಅಂಗಾರ ಮಾತನಾಡಿ, ತಾನು ಕಳೆದ ಐದು ಅವಧಿಯಿಂದ ಶಾಸಕನಾಗಿ ಆಯ್ಕೆಯಾಗಿ ಜನರ, ಕ್ಷೇತ್ರದ ಸಮಸ್ಯೆಗೆ ಸ್ಪಂದಿಸಿದ್ದು, ಆದರೆ ಕಾಂಗ್ರೆಸಿಗರು ತಾನು ಏನು ಮಾಡಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ತನ್ನ ಕಾರ್ಯಕ್ಷಮತೆಗೆ ಕಾಂಗ್ರೇಸ್‌ನ ಸರ್ಟಿಫಿಕೇಟ್ ಬೇಕಿಲ್ಲ. ನನ್ನನ್ನು ಪ್ರಶ್ನಿಸುವ ಹಕ್ಕು ಮತದಾರರಿಗೆ ಇದೆಯೇ ಹೊರತು ಕಾಂಗ್ರೇಸಿಗರಿಗಿಲ್ಲ ಎಂದರು.

ಬಿಜೆಪಿ ಅಭ್ಯರ್ಥಿ ಪುಷ್ಪಾವತಿ ಗೌಡ ಕಳುವಾಜೆ ತನ್ನನ್ನು ಅತ್ಯಧಿಕ ಮತಚಲಾಯಿಸುವ ಮೂಲಕ ಜಿ.ಪಂ.ಸದಸ್ಯೆಯಾಗಿ ಆಯ್ಕೆ ಮಾಡುವಂತೆ ವಿನಂತಿಸಿದರು.

ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ಸಂಜೀವ ಮಠಂದೂರು, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಾನಂದ ಟಿ.ಪುಣ್ಚತ್ತಾರು, ಕಾರ್ಯದರ್ಶಿ ಗಣೇಶ್ ಉದುನಡ್ಕ, ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಸುಳ್ಯ ಕ್ಷೇತ್ರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಮೀಳಾ ಜನಾರ್ಧನ್, ಪುತ್ತೂರು ತಾ.ಪಂ ಅಧ್ಯಕ್ಷೆ ಪುಲಸ್ತ್ಯಾ ರೈ, ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

ಬಿಜೆಪಿಗೆ ಸೇರ್ಪಡೆ:

ಇದೇ ಸಂಧರ್ಭದಲ್ಲಿ ಕೊರಗು ಮುದುವ, ಕುಂಞ ಮುದುವ,ಕಾರ್ತಿಕ್ ಮುದುವ, ಮೋಹನ ಪಳ್ಳತ್ತಾರು.ಮೋನಪ್ಪ ಕಾಯಿಮಣ, ಮಾಧವ ಗೌಡ ಇವರು ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

2

ಚುನಾವಣಾ ಉಸ್ತುವಾರಿ,ಪುತ್ತೂರು ತಾ.ಪಂ.ಉಪಾಧ್ಯಕ್ಷ ದಿನೇಶ್ ಮೆದು ಸ್ವಾಗತಿಸಿ,ವಂದಿಸಿದರು,ಸುಳ್ಯ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin