ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ನಾಯಕರ ಬಂಧನ ಯತ್ನ ಹಾಗೂ ಅಶಾಂತಿಯ ವಾತಾವರಣ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಂಸದ ನಳಿನ್ಕುಮಾರ್ ಕಟೀಲ್ ರಷ್ಯಾ ಪ್ರವಾಸ ಮೊಟಕುಗೊಳಿಸಿ ಜುಲೈ 12 ರಂದೇ ಮಂಗಳೂರಿಗೆ ಆಗಮಿಸಲಿದ್ದಾರೆ. ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ನೇತೃತ್ವದ ಸಂಸದೀಯ ನಿಯೋಗದ ಜತೆ ಸಂಸದರು ರಷ್ಯಾಕ್ಕೆ ತೆರಳಿದ್ದರು. 3 ದಿನಗಳ ಕಾಲ ರಷ್ಯಾ ಫೆಡರೇಶನ್ನ ವಿವಿಧ ಸಭೆಗಳಲ್ಲಿ ಭಾಗವಹಿಸಿ, ಜುಲೈ 14 ರಂದು ಭಾರತಕ್ಕೆ ಮರಳುವ ಕಾರ್ಯಕ್ರಮ ನಿಗದಿಯಾಗಿತ್ತು. ಇದೀಗ ಸ್ಪೀಕರ್ ಅವರ ಅನುಮತಿ ಪಡೆದು ನಳಿನ್ಕುಮಾರ್ ಕಟೀಲ್ ಮುಂಚಿತವಾಗಿಯೇ ಸ್ವದೇಶಕ್ಕೆ ಮರಳಲಿದ್ದಾರೆ.