ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ನೇತೃತ್ವದ ಸಂಸದೀಯ ನಿಯೋಗ ರಷ್ಯಾಕ್ಕೆ ಭೇಟಿ ನೀಡಿದ್ದು , ರಷ್ಯಾ ಫೆಡರೇಶನ್ನ ಸ್ಟೇಟ್ ಡ್ಯೂಮಾದ ಅಧ್ಯಕ್ಷ ವಿ.ವೊಲೊಡಿನ್ ಜತೆ 4ನೇ ಅಂತರ್ ಸಂಸದೀಯ ಆಯೋಗದ ಸಭೆ ನಡೆಸಿತು. ದ.ಕ.ಸಂಸದ ನಳಿನ್ಕುಮಾರ್ ಕಟೀಲ್, ಸಂಸದರಾದ ಹೇಮಮಾಲಿನಿ, ಡಾ.ವೀರೇಂದ್ರ ಕುಮಾರ್, ಮಹಮ್ಮದ್ ಸಲೀಂ ಹಾಗೂ ಅಧಿಕಾರಿಗಳು ಸಂಸದೀಯ ನಿಯೋಗದ ಸದಸ್ಯರಾಗಿದ್ದರು.