ರೂ.28.03 ಕೋಟಿ ವೆಚ್ಚದ ಮಂಗಳೂರು ನೇತ್ರಾವತಿ ಕ್ಯಾಬಿನ್ ನಿಂದ ಮಂಗಳೂರು ಕೇಂದ್ರ ರೈಲು ನಿಲ್ದಾಣದ ವರೆಗಿನ ಸುಮಾರು 1.5 ಕಿ.ಮೀ ಉದ್ದದ ರೈಲ್ವೆ ಹಳಿಯ ದ್ವಿಪಥ ಕಾಮಗಾರಿ ಹಾಗೂ ರೂ.90.00 ಲಕ್ಷ ವೆಚ್ಚದ ಮಂಗಳೂರು ಕೇಂದ್ರ ರೈಲು ನಿಲ್ದಾಣದ 3ನೇ ಪಾದಚಾರಿ ಮೇಲ್ಸೇತುವೆಯ ಕಾಮಗಾರಿಗೆ ದಿನಾಂಕ 18-8-2017 ರಂದು ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭಾಕರ ಪ್ರಭುರವರು ವಿಡಿಯೋ ಕಾನ್ಫೆರೆನ್ಸ್ ಮೂಲಕ, ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.