ಮಾನ್ಯ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಇವರು ದಿನಾಂಕ:15-07-2016 ರಂದು ನಡೆಸಿದ ರೈಲ್ವೇ ಅಧಿಕಾರಿಗಳ ಸಭೆಯ ಫಲವಾಗಿ ಮಂಗಳೂರು ಕೇಂದ್ರ ರೈಲು ನಿಲ್ದಾಣವನ್ನು ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಲು ಒಟ್ಟು ರೂ. 35.74 ಲಕ್ಷ ಅನುದಾನ, ಮಂಗಳೂರು ಕೇಂದ್ರ ರೈಲುನಿಲ್ದಾಣದ ಮುಂಭಾಗ ಹಾಗೂ ವಾಹನ ನಿಲುಗಡೆ ಪ್ರದೇಶದ ಅಭಿವೃದ್ಧಿಗೆ ರೂ. 25.57 ಲಕ್ಷ ಹಾಗೂ ನಿಲ್ದಾಣದ ಎರಡನೇ ಪ್ರವೇಶದ್ವಾರದ ಬಳಿ ವಾಹನ ನಿಲುಗಡೆ ಪ್ರದೇಶದ ಅಭಿವೃದ್ಧಿಗೆ ರೂ.11.87 ಲಕ್ಷ ಸೇರಿದಂತೆ ಒಟ್ಟು ರೂ.73.18 ಲಕ್ಷ ಶೇಷ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಕಾಮಗಾರಿಯ ಅನುಷ್ಠಾನಗೊಳಿಸುವ ಬಗ್ಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ಭರವಸೆಯನ್ನು ಮಾನ್ಯ ಸಂಸದರು ನೀಡಿರುತ್ತಾರೆ.