ಮಂಗಳೂರಿನಲ್ಲಿ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭಾಗವಹಿಸಿ ವೈದ್ಯರಿಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ನಂತರ ಪ್ರತಿಭಟನಾನಿರತ ವೈದ್ಯರಿಂದ ಮನವಿಯನ್ನು ಸ್ವೀಕರಿಸಿದರು.
ಈ ಸಂಬಂಧ ಪೊಲೀಸ್ ಅಧಿಕಾರಿಗಳೊಂದಿಗೆ ಮಾತಾಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು. ಅಲ್ಲದೆ ಮುಂಬರುವ ದಿನಗಳಲ್ಲಿ ಲೋಕಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಎಂ.ಎಲ್.ಸಿ ಶ್ರೀ.ಮೋನಪ್ಪ ಭಂಡಾರಿ, ಮಂಗಳೂರು ದಕ್ಷಿಣ ಬಿ.ಜೆ.ಪಿ ಅಧ್ಯಕ್ಷರಾದ ಶ್ರೀ.ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಬಿ.ಜೆ.ಪಿ ಅಧ್ಯಕ್ಷರಾದ ಡಾ| ಭರತ್ ಶೆಟ್ಟಿ, , ಡಾ| ಶಾಂತರಾಮ್ ಶೆಟ್ಟಿ, ಡಾ| ಅಣ್ಣಯ್ಯ ಕುಲಾಲ್, ಡಾ| ಭಾಸ್ಕರ್ ಶೆಟ್ಟಿ, ಡಾ| ರಾಘವೇಂದ್ರ ಭಟ್, ಡಾ| ಕೆ.ವಿ ದೇವಾಡಿಗ, ಡಾ| ಹಬೀಬ್ ರೆಹ್ಮಾನ್, ಡಾ| ಜೆ.ಪಿ ಆಳ್ವ, ಡಾ| ಸತೀಶ್ ಭಂಡಾರಿ, ಡಾ| ಜೆ.ಪಿ ಶೆಟ್ಟಿ, ಡಾ| ಕೆ.ಆರ್ ಕಾಮತ್, ಡಾ| ಡಿ.ವೈ ಸತೀಶ್ ಭಟ್, ಐ. ಎಂ.ಎ ಯಾ ಪ್ರಮುಖರು ಹಾಗೂ ಇತರರು ಉಪಸ್ಥಿತರಿದ್ದರು.