Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಸಂಸದರ ಆದರ್ಶ ಗ್ರಾಮ ಯೋಜನೆ : ಬಳ್ಪ ಗ್ರಾಮದಲ್ಲಿ ವಿವಿಧ ಯೋಜನೆಗಳ ಲೋಕಾಪ೯ಣೆ

ಬಳ್ಪ : ಸಂಸದರ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ವಿವಿಧ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮವನ್ನು 5-1-2016 ರಂದು ಬಳ್ಪದ ಗ್ರಾಮ ಪಂಚಾಯತ್ ಕಚೇರಿ ವಠಾರದಲ್ಲಿ ಏರ್ಪಡಿಸಲಾಗಿತ್ತು.

balpa1

balpa4

balpa5

balpa6

balpa7

balpa2

balpa3

ಸಿಂಡಿಕೇಟ್ ಬ್ಯಾಂಕ್ ವತಿಯಿಂದ ಹೊಸ ಶಾಖೆ, ಎಂ.ಎಸ್.ಇ.ಝಡ್ ವತಿಯಿಂದ ಬಳ್ಪ ಗ್ರಾಮ ಪಂಚಾಯತ್‌ಗೆ ಇ-ಆಡಳಿತ ಸೌಲಭ್ಯ, ಎಂ.ಸಿ.ಎಫ್. ವತಿಯಿಂದ ಎರಡು ನವೀಕೃತ ಆರೋಗ್ಯ ಕೇಂದ್ರಗಳು, ಬಿ.ಪಿ.ಎಲ್. ಕಾರ್ಡುದಾರರಿಗೆ ಎಲ್.ಪಿ.ಜಿ. ಸಂಪರ್ಕ ಹಾಗೂ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ರಸ್ತೆ ಕಾಮಗಾರಿಗಳ ಶಿಲಾನ್ಯಾಸವನ್ನು ಈ ಸಂದರ್ಭದಲ್ಲಿ ನೆರವೇರಿಸಲಾಯಿತು.

ಸದರ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಲೋಕಾರ್ಪಣೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ನೆರವೇರಿಸಿದರು.

ಅಧ್ಯಕ್ಷತೆಯನ್ನು ಶ್ರೀ ಎಸ್. ಅಂಗಾರ, ಮಾನ್ಯ ಶಾಸಕರು, ಸುಳ್ಯ ವಿಧಾನಸಭಾ ಕ್ಷೇತ್ರ ಇವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೇತಕರು, ವಿಧಾನಪರಿಷತ್, ಕರ್ನಾಟಕ ಸರಕಾರ ; ಶ್ರೀಮತಿ ಆಶಾ ತಿಮ್ಮಪ್ಪ ಗೌಡ, ಮಾನ್ಯ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ; ಶ್ರೀ ಕೋಟಾ ಶ್ರೀನಿವಾಸ ಪೂಜಾರಿ, ಮಾನ್ಯ ವಿಧಾನಪರಿಷತ್  ಸದಸ್ಯರು ; ಶ್ರೀ ಜಯಪ್ರಕಾಶ್ ಕುಂಚಡ್ಕ, ಮಾನ್ಯ ಅಧ್ಯಕ್ಷರು, ತಾಲೂಕು ಪಂಚಾಯತ್, ಸುಳ್ಯ ; ಶ್ರೀ ದೇವರಾಜ್ ಕೆ.ಎಸ್. ಮಾನ್ಯ ಜಿಲ್ಲಾ ಪಂಚಾಯತ್ ಸದಸ್ಯರು, ಗುತ್ತಿಗಾರು ಕ್ಷೇತ್ರ ; ಶ್ರೀ ಎ. ಬಿ. ಇಬ್ರಾಹಿಂ, ಭಾ.ಆ.ಸೇ., ಮಾನ್ಯ ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ; ಶ್ರೀಮತಿ ಪಿ. ಐ. ಶ್ರೀವಿದ್ಯಾ, ಭಾ.ಆ.ಸೇ., ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ದ.ಕ. ಜಿಲ್ಲಾ ಪಂಚಾಯತ್, ಮಂಗಳೂರು ; ಶ್ರೀ ಎಸ್. ಟಿ. ಕರ್ಕೇರ, ಜನರಲ್ ಮ್ಯಾನೇಜರ್, ಎಂ.ಎಸ್.ಇ.ಝಡ್. ; ಶ್ರೀ ಪಿ. ಜೆ. ರೈ, ಜನರಲ್ ಮ್ಯಾನೇಜರ್, ಎಂ.ಸಿ.ಎಫ್.  ; ಶ್ರೀ ಕೆ. ಟಿ. ರೈ, ಫೀಲ್ಡ್ ಜನರಲ್ ಮ್ಯಾನೇಜರ್, ಸಿಂಡಿಕೇಟ್ ಬ್ಯಾಂಕ್ ಇವರು ಆಗಮಿಸಿದ್ದರು.

Highslide for Wordpress Plugin