ಬಜಪೆ ಪೊಲೀಸ್, ಸಂಸದ ಕಟೀಲ್ ಗೆ ಆಸ್ರಣ್ಣ ಮನವಿ
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಬಗ್ಗೆ ಅತ್ಯಂತ ಅವಾಚ್ಯ ಹಾಗೂ ಅನಾಗರಿಕ ಶಬ್ದಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿ ಹಿಂದು ಧಾರ್ಮಿಕ ಭಾವನೆಗೆ ಘಾಸಿ ಮಾಡಿದವರನ್ನು ಪತ್ತೆ ಹಚ್ಚಿ ಕಾನೂನಿನಡಿ ಸೂಕ್ತ ಶಿಕ್ಷೆ ನೀಡಬೇಕು ಎಂದು ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ಕೆ.ವಾಸುದೇವ ಆಸ್ರಣ್ಣ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಪ್ರತಿಯನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೂ ಸಲ್ಲಿಸಿದ್ದಾರೆ.
ಜಬ್ಬಾರ್ ಬಿ.ಸಿ.ರೋಡ್, ಇಮ್ರಾನ್ ಆಜ್ಮಿ, ಗೌಡ ಮಹೇಶ್, ಅಮೀರ್ ಅಮ್ಮಿ, ಮನ್ಸೂರ್ ಅಮಾನ್, ಟೈಗರ್ ಮುಜೈನ್ ಮಂಗಳೂರು, ಶೇಖ್ ಶಾ, ರಾಮ ಲಕ್ಷ್ಮಣ ಶಕ್ಕುಶೈನ್ ಮಂಗಳೂರು ಎಂಬಿತ್ಯಾದಿ ಹೆಸರಲ್ಲಿ ಖಾತೆ ಹೊಂದಿರುವ ವ್ಯಕ್ತಿಗಳು ಇಂಥ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ಕಿನಲ್ಲಿ ಹಾಕಿ ಅಶಾಂತಿಗೆ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಹಾಕಿದ್ದಾರೆ ಎಂದು ಆಸ್ರಣ್ಣ ದೂರಿನಲ್ಲಿ ಉಲ್ಲೇಖಿಸಿದ್ದಾರೆ.