ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ.ನಳಿನ್ ಕುಮಾರ್ ಕಟೀಲ್, ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ.ಪ್ರಹ್ಲಾದ್ ಜೋಷಿ, ರಾಜ್ಯಸಭಾ ಸದಸ್ಯರಾದ ಶ್ರೀ.ಆಯನೂರು ಮಂಜುನಾಥ್, ಕಾಸರಗೋಡು ಲೋಕಸಭಾ ಸದಸ್ಯರಾದ ಶ್ರೀ.ಪಿ.ಕರುಣಾಕರನ್, ಕಾಞಂಗಾಡ್-ಕಾಣಿಯೂರು ರೈಲು ಮಾರ್ಗ ಕ್ರೀಯಾ ಸಮಿತಿಯ ಅಧ್ಯಕ್ಷರಾದ ಶ್ರೀ.ಎನ್.ಎ.ರಾಮಚಂದ್ರ ಹಾಗೂ ಸದಸ್ಯರಾದ ಶ್ರೀ ಹರೀಶ್ ಕಂಜಿಪಿಲಿ, ಶ್ರೀಕಾಂತ್, ಶ್ರೀ.ಸುಧಾಕರ ರೈ, ಶ್ರೀರಾಮ್ ಪಾಟಾಜೆ, ಸೂರ್ಯನಾರಾಯಣ ಭಟ್, ಯೂಸುಫ್ ಆಲಿ, ಸಿಎ ಪೀಟರ್ ಇವರನ್ನೊಳಗೊಂಡ ನಿಯೋಗವು ಮಾನ್ಯ ಕೇಂದ್ರ ರೈಲ್ವೇ ಸಚಿವರಾದ ಶ್ರೀ.ಸುರೇಶ್ ಪ್ರಭ ಇವರನ್ನು ದಿನಾಂಕ: 10-08-2015 ರಂದು ಭೇಟಿ ಮಾಡಿ ಕೇಂದ್ರ ಸರಕಾರವು 2014-15 ರ ರೈಲ್ವೇ ಬಜೆಟ್ನಲ್ಲಿ ಘೋಷಿಸಿದ ಕಾಞಂಗಾಡ್-ಕಾಣಿಯೂರು ರೈಲು ಮಾರ್ಗದ ಸರ್ವೇ ಕಾರ್ಯವನ್ನು ಶ್ರೀಘ್ರ ಪೂರ್ಣಗೊಳಿಸುವಂತೆ ಮನವಿ ಸಲ್ಲಿಸಿರು. ಮಾನ್ಯ ಕೇಂದ್ರ ಸಚಿವರು ಸದ್ರಿ ಸರ್ವೆ ಕಾರ್ಯವನ್ನು ಶೀಘ್ರ ಮುಗಿಸುವಂತೆ ರೈಲ್ವೇ ಇಲಾಖೆಗೆ ಸೂಚಿಸಿದರು.