ಮ೦ಗಳೂರಿನ ಪಾ೦ಡೇಶ್ವರದಲ್ಲಿ ಇರುವ ಕಾರ್ಪೊರೇಶನ್ ಬ್ಯಾ೦ಕಿನ ಪ್ರಧಾನ ಕಛೇರಿಯನ್ನು ಮ೦ಗಳೂರಿನಿ೦ದ ಬೆ೦ಗಳೂರಿಗೆ ವರ್ಗಾಯಿಸುವ ಯೋಜನೆ ಇರುವುದಾಗಿ ತಿಳಿದು ಬ೦ದಿದೆ. ಆಡಳಿತಾತ್ಮಕ ಘಟಕಗಳ ಹೆಸರಿನಲ್ಲಿ ಮಾಡುವ ಈ ವರ್ಗಾವಣೆಯು ಆಡಳಿತ ಮ೦ಡಳಿಯ ಒ೦ದು ಋಣಾತ್ಮಕ, ಅನವಶ್ಯಕ ಹಾಗೂ ಸಾರ್ವಜನಿಕವಾಗಿ ಒಪ್ಪಲಾಗದ ನಿರ್ಧಾರ.
ಸ್ಮಾರ್ಟ್ ಸಿಟಿ ಯೋಜನೆಯ ಪಟ್ಟಿಯಲ್ಲಿರುವ ಮ೦ಗಳೂರು ನಗರದಿ೦ದ ಸರಕಾರಿ ಸ್ವಾಮ್ಯದ ಬ್ಯಾ೦ಕಿನ ಪ್ರಧಾನ ಕಚೇರಿಯನ್ನು ಬೆ೦ಗಳೂರಿಗೆ ಸ್ಥಳಾ೦ತರಿಸುವುದು ವಿರೋಧಾಭಾಸದ ಬೆಳವಣಿಗೆ. ಬ್ಯಾ೦ಕಿನ ಈ ಯೋಜನೆಯನ್ನು, ನಾನು ಪ್ರಬಲವಾಗಿ ವಿರೋಧಿಸುತ್ತೇನೆ.
ಕ್ಷಿಪ್ರ ಸ೦ಪರ್ಕ ಮತ್ತು ಯಾತಾಯಾತದ ಇ೦ದಿನ ದಿನಗಳಲ್ಲಿ ಬ್ಯಾ೦ಕಿನ ಪ್ರಧಾನ ಕಾರ್ಯಾಲಯವು ಮ೦ಗಳೂರಿನಲ್ಲಿ ಮು೦ದುವರಿಯುವುದರಿ೦ದ ವ್ಯಾವಹಾರಿಕ ಸಮಸ್ಯೆಗಳೇನೂ ಸ೦ಭವಿಸುವ ಸಾಧ್ಯತೆಗಳಿಲ್ಲ. ಕಾರ್ಪೊರೇಶನ್ ಬ್ಯಾ೦ಕಿನ ಪ್ರಧಾನ ಕಾರ್ಯಾಲಯವು ಮ೦ಗಳೂರು ನಗರದ ಒ೦ದು ಐತಿಹಾಸಿಕ ಹಾಗೂ ಹೆಮ್ಮೆಯ ಸ೦ಕೇತ. ಮ೦ಗಳೂರಿನ ಮಹಾಜನತೆಯೂ ಕೂಡ ಇ೦ತಹ ವರ್ಗಾವಣೆಯನ್ನು ಒಪ್ಪದು.
ಕಾರ್ಪೊರೇಶನ್ ಬ್ಯಾ೦ಕಿನ ಪ್ರಧಾನ ಕಾರ್ಯಾಲಯದ ಇರುವಿಕೆಯು ಮ೦ಗಳೂರಿನಲ್ಲಿ ಸುಮಾರು ಒ೦ದು ಸಾವಿರಕ್ಕೂ ಹೆಚ್ಚು ಪರಿವಾರಗಳಿಗೆ ಹಲವು ದಶಮಾನಗಳಿ೦ದ ಪ್ರತ್ಯಕ್ಷ್ಶ ಮತ್ತು ಪರೋಕ್ಷವಾಗಿ ಜೀವನದ ಆಸರೆಯಾಗಿದೆ ಎ೦ಬುದನ್ನು ಬ್ಯಾ೦ಕಿನ ಆಡಳಿತವು ತಿಳಿದುಕೊಳ್ಳಬೇಕು.
ಈ ಬಗ್ಗೆ ಕೇ೦ದ್ರ ವಿತ್ತ ಸಚಿವ ಮತ್ತು ಸಹಾಯಕ ವಿತ್ತ ಸಚಿವರ ಬಳಿ ನಿಯೋಗ ಒಯ್ಯುವುದಲ್ಲದೆ, ಈ ವರ್ಗಾವಣೆಯನ್ನು ರದ್ದುಗೊಳಿಸಲು ಭಾರತೀಯ ಜನತಾ ಪಕ್ಷವು ಇತರ ಎಲ್ಲಾ ಕಾರ್ಯಗಳನ್ನು ನಡೆಸುವುದು. ನಗರದ ವಾಣಿಜ್ಯ ಸ೦ಘಟನೆಗಳು ಮತ್ತು ನಾಗರಿಕ ಸಮಿತಿಗಳನ್ನೂ ಒಗ್ಗೂಡಿಸಿ, ಈ ಹೋರಾಟವನ್ನು ನಡೆಸಲಾಗುವುದು. ಈ ಬಾಬ್ತು ಬ್ಯಾ೦ಕಿನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರನ್ನು ಕೂಡ ನಾನು ಅತಿ ಶೀಘ್ರವಾಗಿ ಭೇಟಿಯಾಗಲಿರುವೆನು. ಮ೦ಗಳೂರಿನ ನಾಗರಿಕರೆಲ್ಲರೂ ಈ ಹೋರಾಟದಲ್ಲಿ ನಮಗೆ ಸಹಕಾರ ನೀಡಬೇಕಾಗಿ ವಿನ೦ತಿ.