Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಕೇಂದ್ರ ಬಜೆಟ್ : ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ

nalin

ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿರುವ ಕೇಂದ್ರದ ಬಜೆಟ್ ರೈತರು ಹಾಗೂ ಹಳ್ಳಿಯ ಜನತೆಗೆ ಹೊಸ ಅನುಕೂಲಗಳನ್ನು ಕಲ್ಪಿಸಿದೆ. ಭ್ರಷ್ಟಾಚಾರ ಹಾಗೂ ಕಪ್ಪು ಹಣದ ಮೇಲೆ ನಿಯಂತ್ರಣ ಸಾಧಿಸುವಲ್ಲಿಯೂ ಬಜೆಟ್ ಪ್ರಮುಖ ಅಸ್ತ್ರವಾಗಿದೆ. ರೈತರಿಗೆ ಕೃಷಿ ಸಾಲದ ಮಿತಿ ಏರಿಕೆ, ಬೆಳೆ ವಿಮೆ ಯೋಜನೆ ಹೆಚ್ಚಳ, ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ವಿತರಣೆ ಕೃಷಿ ಕ್ಷೇತ್ರದ ಅಭಿವೃದ್ದಿಗೆ ಪೂರಕವಾಗಲಿದೆ. ಕರಾವಳಿ ಭಾಗದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಗಮನ ಹರಿಸಲಾಗಿದೆ. ಎಲ್ಲ ಗ್ರಾಮಗಳಿಗೆ ವಿದ್ಯುತ್ ಪೂರೈಕೆ, 1.5 ಲಕ್ಷಕ್ಕೂ ಹೆಚ್ಚು ಗ್ರಾಮಗಳಿಗೆ ವೇಗದ ಇಂಟರ್ ನೆಟ್ ವ್ಯವಸ್ಥೆ ಪ್ರಮುಖ ಘೋಷಣೆಯಾಗಿದೆ. ರೈಲ್ವೆ ಬಜೆಟ್‌ನಲ್ಲಿ ಇ-ಟಿಕೆಟ್ ಮೇಲಿನ ಸೇವಾ ಶುಲ್ಕ ತೆರಿಗೆ ರದ್ದು, ಎಲ್ಲ ರೈಲುಗಳಲ್ಲಿ ಬಯೋ ಟಾಯ್ಲೆಟ ಅಳವಡಿಕೆ , ತೀರ್ಥಯಾತ್ರೆ ಮತ್ತು ಪ್ರವಾಸಗಳಿಗಾಗಿ ವಿಶೇಷ ರೈಲಿನ ವ್ಯವಸ್ಥೆ ಸ್ವಾಗತಾರ್ಹ .

– ನಳಿನ್‌ಕುಮಾರ್ ಕಟೀಲ್,ಸಂಸದರು.ದ.ಕ.

Highslide for Wordpress Plugin