Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ದ.ಕ. ಜಿಲ್ಲೆಯಲ್ಲಿ ರೈಲ್ವೇ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಲ್ಲಿ ಮನವಿ ಮಾಡಿದ ನಳಿನ್

ನವದೆಹಲಿ : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಇವರು ಇಂದು ಮಾನ್ಯ ಕೇಂದ್ರ ರೈಲ್ವೇ ಸಚಿವರಾದ ಪಿಯೂಶ್ ಗೋಯಲ್ ಹಾಗೂ ಕೇಂದ್ರ ರಾಜ್ಯ ರೇಲ್ವೇ ಖಾತೆ ಸಚಿವ  ಸುರೇಶ್ ಅಂಗಡಿಯವರನ್ನು ನವದೆಹಲಿಯಲ್ಲಿ ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈಲ್ವೇ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರನ್ನು ವಿನಂತಿಸಿದರು.

ಪ್ರಮುಖ ಬೇಡಿಕೆಗಳು:

1.  ಪ್ರತ್ಯೇಕ ಮಂಗಳೂರು ವಿಭಾಗ ರಚನೆ.
2.  ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಹೊಸ ಸುಸಜ್ಜಿತ ಕಟ್ಟಡ ನಿರ್ಮಾಣ ಹಾಗೂ ಇತರ ಮೂಲಸೌಕರ್ಯಗಳ ಅಭಿವೃದ್ಧಿ.
3.  ಮಂಗಳೂರು – ಬೆಂಗಳೂರು ಮಧ್ಯೆ ಪ್ರಸ್ತುತ ವಾರಕ್ಕೆ ಮೂರು ದಿನ ಸಂಚರಿಸುವ (ಮಂಗಳೂರು-ಯಶವಂತಪುರ ಎಕ್ಸ್ ಪ್ರೆಸ್ 16585/86) ರೈಲನ್ನು ಪ್ರತಿನಿತ್ಯ ಓಡಿಸುವುದು.
4.   ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ 3 ಮತ್ತು 4ನೇ ಪ್ಲಾಟ್ ಫಾರಂ ನಿರ್ಮಾಣ ಕಾಮಗಾರಿ ತ್ವರಿತಗೊಳಿಸುವುದು,
5.   ಮಂಗಳೂರು ಮೀರಜ್ ಮಹಾಲಕ್ಷ್ಮಿ ಎಕ್ಸಪ್ರೆಸ್ ರೈಲನ್ನು ಪುನ:ರಾರಂಭಿಸಿ ಮುಂಬೈ (ಎಂ.ಸಿ.ಎಸ್.ಟಿ) ವರೆಗೆ ವಿಸ್ತರಿಸುವುದು.
6.   ಮಂಗಳೂರು – ಪೂನಾ ಮಧ್ಯೆ ಹೊಸ ರೈಲನ್ನು ಓಡಿಸುವುದು.
7.   ಮೂಕಾಂಬಿಕಾ ರೋಡ್ (ಬೈಂದೂರು) – ಕಾಸರಗೋಡು ರೈಲನ್ನು ಪುನ:ರಾರಂಭಿಸಿ ಗುರುವಾಯುರುವರೆಗೆ ವಿಸ್ತರಿಸುವುದು.
8.   ಕಾರವಾರ – (ಮಂಗಳೂರು ಜಂಕ್ಷನ್ ಮೂಲಕ) ಯಶವಂತಪುರ ಮಧ್ಯೆ ಸಂಚರಿಸುವ (16515/16) ಹಗಲು ರೈಲನ್ನು ತಿರುಪತಿ ವರೆಗೆ ವಿಸ್ತರಿಸುವುದು.
9.   ಮಂಗಳೂರು – ತಿರುಪತಿ ಮಧ್ಯೆ ಹೊಸ ರೈಲು ಮಂಜೂರು ಮಾಡುವುದು.
10. ಮಂಗಳೂರು – ಬೆಂಗಳೂರು ಮಧ್ಯೆ ಸಂಚರಿಸುವ ರೈಲುಗಳ ವೇಗ ಹೆಚ್ಚಿಸುವುದು.
11. ಮಂಗಳೂರಿನಿಂದ ಉತ್ತರ ಭಾರತದ ಪವಿತ್ರ ತೀರ್ಥಕ್ಷೇತ್ರಗಳಾದ ವಾರಣಾಶಿ/ಪ್ರಯಾಗ್ ರಾಜ್/ ಗೋರಕ್­ಪುರ ಸಂಪರ್ಕಿಸುವಂತೆ ಹೊಸ ರೈಲು ಮಂಜೂರು ಮಾಡುವುದು.
12.  ಸುಬ್ರಹ್ಮಣ್ಯ-ಸಕಲೇಶಪುರ ಹಳಿ ದ್ವಿಪಥ ಕಾಮಗಾರಿ ಕೈಗೆತ್ತಿಕೊಳ್ಳುವುದು.
13.  ಸುಬ್ರಹ್ಮಣ್ಯ ರೋಡ್ ರೈಲುನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ.
14.  ಮಂಗಳೂರು – ಪುತ್ತೂರು – ಸುಬ್ರಹ್ಮಣ್ಯ ಪ್ಯಾಸಂಜರ್ ರೈಲು ಹಾಗೂ ಕಾರವಾರ-ಬೆಂಗಳೂರು ರೈಲಿನ ವೇಳೆಯಲ್ಲಿ ಬದಲಾವಣೆ ಮಾಡುವುದು.
15. ಮಂಗಳೂರು – ಕೋಯಂಬತ್ತೂರು ಇಂಟರ್ ಸಿಟಿ ಎಕ್ಸ್ ಪ್ರೆಸ್ (22609/10) ರೈಲಿಗೆ ಗುರುವಾಯೂರಿಗೆ ಪ್ರಯಾಣಿಸುವ ಯಾತ್ರಿಗಳಿಗೆ ಅನುಕೂಲವಾಗುವಂತೆ ಕುಟ್ಟಿಪುರಂ ರೈಲು ನಿಲ್ದಾಣದಲ್ಲಿ ನಿಲುಗಡೆ ಒದಗಿಸುವುದು
16. ಕೋಯಂಬತ್ತೂರು- ಮಂಗಳೂರು ಜಂಕ್ಷನ್ – ಜಬಲ್ಪುರ್ ಎಕ್ಸ್ ಪ್ರೆಸ್ ವಿಶೇಷ ರೈಲನ್ನು ಖಾಯಂಗೊಳಿಸುವುದು ಸೇರಿದಂತೆ ಇನ್ನೂ ಹಲವು ಬೇಡಿಕೆಗಳನ್ನು ಪೂರೈಸುವಂತೆ ಮಾನ್ಯ ಸಚಿವರಿಗೆ ಸಂಸದರು ಮನವಿ ಮಾಡಿದರು.

ಸಂಸದರ ಬೇಡಿಕೆಗಳನ್ನು ಪರಿಶಿಲಿಸಿದ ಸಚಿವರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು ಹಾಗೂ ಅಲ್ಲದೇ ಮಂಗಳೂರು – ಬೆಂಗಳೂರು ಮಧ್ಯೆ ಪ್ರಸ್ತುತ ವಾರಕ್ಕೆ ಮೂರು ದಿನ ಸಂಚರಿಸುವ (ಮಂಗಳೂರು-ಯಶವಂತಪುರ ಎಕ್ಸ್.ಪ್ರೆಸ್ 16585/86) ರೈಲನ್ನು ಪ್ರತಿನಿತ್ಯ ಓಡಿಸುವ ಕುರಿತು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಸಂಸದರಿಗೆ ರೈಲ್ವೇ ಸಚಿವರು ತಿಳಿಸಿದರು.

Highslide for Wordpress Plugin