ಮಂಗಳೂರು : ಮಂಗಳೂರಿನ ವಿ.ಟಿ.ರೋಡ್ ಬಳಿಯ ಧನ್ವಂತರಿ ನಗರದ ಲೋಕಾರ್ಪಣೆಯನ್ನು ಗುರುವಾರ ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಧನ್ವಂತರಿ ವಿಗ್ರಹದ ಪ್ರತಿಷ್ಠಾಪನೆಯನ್ನು ಮಂಗಲ್ಪಾಡಿ ಪುಂಡಲೀಕ ಶಣೈ ಮತ್ತು ನಳಿನ್ ಕುಮಾರ ಕಟೀಲ್ ಅವರು ನಡೆಸಿದರು.
ಕಾರ್ಯಕ್ರಮದಲ್ಲಿ ನಾಗರೀಕ ಹಿತರಕ್ಷಣಾ ವೇದಿಕೆಯ ಹನುಮಂತ ಕಾಮತ್, ಕಾರ್ಪೋರೇಟರ್ ಶ್ರೀಮತಿ ಪೂರ್ಣಿಮಾ, ಮಾಜಿ ಕಾರ್ಪೋರೇಟರ್ ಸುರೇಖಾ ಶ್ರೀನಿವಾಸ್, ಪೂಜನ್ ಬಿಲ್ಡರ್ಸ್ನ ದಾಮೋದರ್ ಶೆಣೈ ಮತ್ತು ಮಂಗಲ್ಪಾಡಿ ನರೇಶ್ ಶೆಣೈ ಉಪಸ್ಥಿತರಿದ್ದರು.