ಬದಿಯಡ್ಕ: ಶತಪೂರ್ತಿ ಪೂರೈಸಿದ ನಾಡೋಜ ಕವಿ ಕಯ್ಯಾರ ಕಿಞಣ್ಣ ರೈಯವರಿಗೆ ಮಂಗಳೂರು ಸಂಸದ ನಳಿನ್‌ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರು ಶುಭ ಹಾರೈಸಿದರು. ಬದಿಯಡ್ಕ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ ತಂಡ ಕಾರ್ಯಕರ್ತರೊಂದಿಗೆ ಮತುಕತೆ ನಡೆಸಿ ಅನಂತರ ಕವಿತಾ ಕುಟೀರಕ್ಕೆ ತೆರಳಿ ರೈಯವರಿಗೆ ಶಾಲು ಹೊದಿಸಿ ಪೇಟ ತೊಡಿಸಿ ಆಶೀರ್ವಾದ ಪಡೆದರು. ಮಂಗಳೂರು ಸಂಸದರಲ್ಲದೆ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಮೋನಪ್ಪ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ನಳಿನ್‌ಕುಮಾರ್ ಕಟೀಲ್ ಮಾತನಾಡಿ ಕಯ್ಯಾರ ಕಿಞಣ್ಣ ರೈಯವರ ಜೀವನ ನಮಗೆಲ್ಲಾ ಆದರ್ಶವಾದುದು. ಅವರು ಹಾಕಿ ಕೊಟ್ಟ ಸಾಹಿತ್ಯದ ದಾರಿ ದೀಪ ನಮಗೆಲ್ಲ ಬೆಳಕಾಗಬೇಕು. ನಮ್ಮ ಕರ್ನಾಟಕ ಸರಕಾರವು ಕಯ್ಯಾರರನ್ನು ಗುರುತಿಸುವಲ್ಲಿ ಎಡವಿದೆ. ಅವರಿಗೆ ಅರ್ಹ ಗೌರವ ಲಭಿಸಲು ಪ್ರಯತ್ನಿಸುತ್ತೇವೆ ಎಂದರು.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ. ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಕೆ.ಶ್ರೀಕಾಂತ್, ರಾಜ್ಯ ಉಪಾಧ್ಯಕ್ಷೆ ಪ್ರಮಿಳಾ ಸಿ.ನಾಯಕ್, ಆರ್.ಎಸ್.ಎಸ್.ನೇತಾರ ಗೋಪಾಲ ಚೆಟ್ಟಿಯಾರ್, ಕ್ಯಾಂಪ್ಕೋ ನಿರ್ದೇಶಕ ಐತ್ತಪ್ಪ ಶೆಟ್ಟಿ ಕಡಾರು, ಸುಧಾಮ ಗೋಸಾಡ, ಹರೀಶ್ ನಾರಂಪಾಡಿ, ಮುರಳೀಧರ ಯಾದವ್, ರಮೇಶ್ ಭಟ್ ಕುಂಬಳೆ, ಬದಿಯಡ್ಕ ಪಂಚಾಯತು ಸಮಿತಿ ಪದಾಧಿಕಾರಿಗಳಾದ ರಾಮಕೃಷ್ಣ ಹೆಬ್ಬಾರ್, ಮಹೇಶ್ ವಳಕುಂಜ, ವಿಜಯ ಸಾಯಿ, ಮಹೇಶ್ ನಿಡುಗಳ, ಗಂಗಾಧರ ಪಳ್ಳತ್ತಡ್ಕ, ಬಾಲಕೃಷ್ಣ ಶೆಟ್ಟಿ, ಮಂಜುನಾಥ ಮಾನ್ಯ, ಭಾಸ್ಕರ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.