ಮಂಗಳೂರು : ಮಂಗಳೂರು ಭಾಗದ ರೈಲ್ವೇ ಹಳಿ ದ್ವಿಪಥ ಕಾಮಗಾರಿಗಳಿಗೆ ಕೇಂದ್ರ ಸರಕಾರದಿಂದ ಒಟ್ಟು ರೂ. 327 ಕೋಟಿ ಅನುದಾನ ಬಿಡುಗಡೆಯಾಗಿರುತ್ತದೆ ಎಂದು ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮಂಗಳೂರು ಜಂಕ್ಷನ್ ನಿಂದ ಪಣಂಬೂರುವರೆಗಿನ ಒಟ್ಟು 19 ಕಿ.ಮೀ ದ್ವಿಪಥ ಕಾಮಗಾರಿಗೆ ರೂ. 327 ಕೋಟಿ ಅನುದಾನ ಈಗಾಗಲೇ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಹಾಗೂ ಹೆಚ್ಚುವರಿಯಾಗಿ ಈ ಕಾಮಗಾರಿಗೆ 2016-17 ನೇ ಸಾಲಿಗೆ ರೂ. 100 ಕೋಟಿ ಅನುದಾನವನ್ನು ಕಾಯ್ದಿರಿಸಲಾಗಿದೆ ಹಾಗೂ ನೇತ್ರಾವತಿ ಕ್ಯಾಬಿನ್ನಿಂದ ಮಂಗಳೂರು ಕೇಂದ್ರ ರೈಲುನಿಲ್ದಾಣದವರೆಗಿನ 1.5 ಕಿ.ಮೀ ಹಳಿಗಳ ದ್ವಿಪಥ ಕಾಮಗಾರಿಗೆ ರೂ. 18.93 ಕೋಟಿ ಅನುದಾನ ಕೇಂದ್ರ ಸರಕಾರದಿಂದ ಬಿಡುಗಡೆಯಾಗಿರುತ್ತದೆ.
ರೈಲು ಹಳಿಗಳ ದ್ವಿಪಥ ಕಾಮಗಾರಿಯಿಂದ ರೈಲ್ವೇ ಸುಗಮ ಸಂಚಾರಕ್ಕೆ ಅನುಕೂಲವಾಗುವುದರೊಂದಿಗೆ ಪ್ರಯಾಣಿಕರ ಸಮಯವು ಉಳಿತಾಯವಾಗಲಿದೆ ಎಂದು ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.