Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಮಂಗಳೂರು – ದೆಹಲಿ ವಿಮಾನ ಸೇವೆಗೆ ನಳಿನ್ ಮನವಿ

ನವದೆಹಲಿ : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು-ದೆಹಲಿಗೆ ಬೆಂಗಳೂರು ಮೂಲಕ ವಿಮಾನ ಸೇವೆ ಮತ್ತು ಮಂಗಳೂರು-ಪುಣೆ ಮತ್ತು ಮಂಗಳೂರು-ಬೆಂಗಳೂರಿಗೆ ನೂತನ ವಿಮಾನ ಸೇವೆಯನ್ನು ಆರಂಭಿಸುವಂತೆ ಕೋರಿ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.

Nalin-delhi-flight

Nalin-delhi-flight1

Nalin-delhi-flight2

Nalin-delhi-flight3

ಮಂಗಳೂರು ಟೂರಿಸ್ಟ್ ಹಬ್ ಆಗಿದ್ದು, ಇಲ್ಲಿಗೆ ಆಗಮಿಸುವ ಪ್ರವಾಸಿಗರು, ಇಲ್ಲಿನ ಉದ್ಯಮಿಗಳು, ಕಾರ್ಪೊರೇಟ್ ಉದ್ಯೋಗಿಗಳು, ವಿದೇಶಿಗರು ಮತ್ತು ಸ್ಥಳೀಯರು ದೆಹಲಿಗೆ ಬೆಂಗಳೂರು ಮೂಲಕ ವಿಮಾನ ಸೇವೆ ಆರಂಭಿಸಬೇಕೆಂದು ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ವಿಮಾನಯಾನ ಸಚಿವಾಲಯವು ಏರ್ ಇಂಡಿಯಾಗೆ ಮಂಗಳೂರು-ದೆಹಲಿ ವಯಾ ಬೆಂಗಳೂರು, ಮಂಗಳೂರು-ಪುಣೆ, ಮಂಗಳೂರು-ಬೆಂಗಳೂರಿಗೆ ನೂತನ ವಿಮಾನ ಸೇವೆ ಆರಂಭಿಸಲು ಸೂಚಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Highslide for Wordpress Plugin