ಮಂಗಳೂರು: ಮೇ 31 : ಇಲ್ಲಿಯ ಬೋಂದೆಲ್ ಬಳಿ 2 ಬೈಕುಗಳ ಮಧ್ಯೆ ಆಕ್ಸಿಡೆಂಟ್ ಆಗಿ ಸಣ್ಣ ಪುಟ್ಟ ಗಾಯಗೊಂಡ ಮಹಿಳೆಯನ್ನು ಅದೇ ದಾರಿಯಲ್ಲಿ ಹೋಗುತ್ತಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ತಮ್ಮ ಕಾರಿನಲ್ಲಿ ಡಾ. ಕ್ಲಿನಿಕ್ ಬಿಟ್ಟು ಹೊದ ಘಟನೆ ಇಂದು ಬೆಳಿಗ್ಗೆ ನಡೆಯಿತು.ಹೆಚ್ಚಿನ ಜನ ಪ್ರತಿನಿಧಿಗಳು ಇಂಥಾಹ ಸಂಧರ್ಭದಲ್ಲಿ ಕಂಡೂ ಕಾಣದಂತೆ ವರ್ತಿಸಿದ ಉದಾಹರಣೆಗಳು ಇರುವಾಗ ಇವರ ಈ ಮಾನವೀಯ ಕಳಕಳಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ವಾರವಷ್ಟೇ ಪ್ರದಾನಿ ಮೋದಿಯವರು ಆಂಬುಲೆನ್ಸ್ ಗೆ ದಾರಿ ಬಿಡುವ ಮೂಲಕ ಜನ ಪ್ರತಿನಿಧಿಗಳಿಗೆ ಮಾದರಿಯಾಗಿದ್ದರು.ಈಗ ಅವರದೇ ಪಕ್ಷದ ಸಂಸದ ಇಂತಾಹುದೇ ಮಾನವೀಯತೆಯನ್ನು ಮೆರೆದಿದ್ದಾರೆ.