Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಯೋಗಕ್ಕೆ ವಿಶ್ವವ್ಯಾಪಿ ಗೌರವ -ನಳಿನ್ ಕುಮಾರ್‌ಕಟೀಲ್

ಯೋಗಕ್ಕೆ ಇಂದು ಭಾರತವಲ್ಲದೇ ವಿಶ್ವದ ಬೇರೆ ಬೇರೆ ದೇಶಗಳಲ್ಲೂ ವಿಶೇಷ ಗೌರವ ಲಭಿಸಿದೆ ಎಂದು ಮಂಗಳೂರು ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್‌ ಕಟೀಲ್‌ರವರು ಮಂಗಳೂರಿನಲ್ಲಿ ಕೆ.ನಾರಾಯಣ ಶೆಟ್ಟಿ ಸಂಸ್ಮರಣಾ ಸಮಿತಿ ಮತ್ತು ಪತಂಜಲಿ ಯೋಗಶಿಕ್ಷಣ ಪ್ರತಿಷ್ಠಾನ (ರಿ) ಇದರ ಅಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯ ಉದ್ಘಾಟನೆಯನ್ನು ಮಾಡಿ ಮಾತನಾಡುತ್ತಿದ್ದರು. ವಿದೇಶದಲ್ಲೂ ಅತೀ ಹೆಚ್ಚು ಜನರು ತಮ್ಮ ದೈನಂದಿನ ಚಟುವಟಿಕೆಯಾಗಿ ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡತ್ತಿರುವುದು ವಿಶೇಷವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಯೋಗ ಪರಂಪರೆಯನ್ನು ವಿಶ್ವಯೋಗ ದಿನಾಚರಣೆ ಆಚರಿಸುವ ಮುಖೇನವಾಗಿ ಜಗತ್ತಿನಲ್ಲಿಯೇ ಯೋಗಕ್ಕೆ ವಿಶ್ವಮಾನ್ಯತೆ ಸಿಗುವಲ್ಲಿ ಕಾರಣೀಭೂತರಾಗಿದ್ದಾರೆ. ಬಾಬಾ ರಾಮ್‌ದೇವ್‌ರವರ ಪತಂಜಲಿ ಯೋಗ ಶಿಕ್ಷಣದ ಮುಖಾಂತರ ಯೋಗ ಜನಜನಿತವಾಗಿದೆ ಎಂದರು.

yoga

ಮುಖ್ಯ ಅತಿಥಿಯಾಗಿ ಗೊಪಾಲಕೃಷ್ಣ ದೇಲಂಪಾಡಿ, ಹಿರಿಯ ಯೋಗ ಸಾಧಕರು, ಸಮಾರಂಭದ ಧ್ಯಕ್ಷತೆಯನ್ನು, ಪತಂಜಲಿ ಯೋಗಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಏಕನಾಥ ಬಾಳಿಗ ವಹಿಸಿದರು. ಸಮಾರಂಭದಲ್ಲಿ ಎಂ.ಎಸ್. ಗುರುರಾಜ್, ಮೋನಪ್ಪ ಶೆಟ್ಟಿ, ಧನಂಜಯ ಕೆ, ಚಂದ್ರಶೇಖರ ಶೆಟ್ಟಿ, ಭಾರತಿ ಶೆಟ್ಟಿ, ಶೇಖರ್‌ ಕಡ್ತಲ ಉಪಸ್ಥಿತರಿದ್ದರು. ಕಾರ್ಯದಶಿ ದಿವಾಕರ ಸಾಮಾನಿ ಸ್ವಾಗತಿಸಿ, ಯೋಗೀಶ್ ಶೆಟ್ಟಿಕಾವೂರು ವಂದಿಸಿದರು. ಶ್ರೀಮತಿ ವಿನಯ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 185 ಕ್ಕೂ ಹೆಚ್ಚು ಸ್ಫರ್ಧಾಳುಗಳು ಭಾಗವಹಿಸಿದರು.

Highslide for Wordpress Plugin