ಶೇಷವನ : ಸುಬ್ರಹ್ಮಣ್ಯ ದೇವರ ಆರಾಧನೆಯಿಂದ ಎರಡು ಸಾಧನೆಗಳು ಆಗುತ್ತದೆ. ಭಕ್ತರಲ್ಲಿ ಧಾರ್ಮಿಕ ಭಾವನೆ ಜೊತೆಯಲ್ಲಿ ಸುಬ್ರಹ್ಮಣ್ಯನ ಇನ್ನೊಂದು ಸ್ವರೂಪವಾದ ನಾಗಾರಾಧನೆಯಿಂದ ಪ್ರಕೃತಿ ಸಂರಕ್ಷಣೆಯೂ ಸಾಧ್ಯ. ದೇವರ ಆರಾಧನೆಯಿಂದ ಹಿಂದೂ ಧರ್ಮ ಜಾಗೃತಿಗೊಳ್ಳುತ್ತಿದೆ. ಧರ್ಮ ಜಾಗೃತಿಗೊಂಡಾಗ ಭರತ ಖಂಡ ಸಮೃದ್ಧಿಗೊಳ್ಳುತ್ತದೆ. ಆ ಕೆಲಸ ಶೇಷವನದಲ್ಲಿ ನಡೆಯುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದರಾದ ನಳೀನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ಹೊಸ ದೇವಸ್ಥಾನ ನಿರ್ಮಾಣ ಮಾಡುವುದಕ್ಕಿಂತ ಹಳೇ ದೇವಸ್ಥಾನದ ಪುನಃ ನಿರ್ಮಾಣ ನೂರು ದೇವಸ್ಥಾನ ಕಟ್ಟಿದ ಫಲ ಎಂದು ಹೇಳಿದರು.
ಸಮಾರಂಭದ ಉದ್ಘಾಟನೆಯನ್ನು ಮಾಯಿಪ್ಪಾಡಿ ಅರಮನೆಯ ದಾನ ಮಾರ್ತಾಂಡ ವರ್ಮ ರಾಜ ಯಾನೆ ರಾಮಂತರಸುಗಳು ಪ್ರತಿನಿಧಿ ನೆರವೇರಿಸಿದರು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿವರ್ಯರು ಆಶೀರ್ವಚನ ಮಾಡಿದರು.
ಶ್ರೀ ಕ್ಷೇತ್ರ ಮಧೂರಿನ ಪ್ರಧಾನ ಅರ್ಚಕರಾದ ಶ್ರೀಕೃಷ್ಣ ಉಪಾದ್ಯಾಯ, ಕಾಸರಗೋಡು ತಾಲೂಕು ಸಂಘ ಚಾಲಕರಾದ ದಿನೇಶ್ ಮಡಪುರ, ಶೇಷವನ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅರ್ಚಕರಾದ ಸುಬ್ರಾಯ ಕಾರಂತ, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣ ಮಯ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶೇಷವನ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್‌ನ ಅನುವಂಶಿಕ ಮೊಕ್ತೇಸರಾದ ಕ್ಷೇತ್ರ ನಿರ್ಮಾಣಕ್ಕೆ ಒಂದು ಎಕ್ರೆ ಸ್ಥಳ ದಾನಗೈದ ಶ್ರೀ ಸದಾಶಿವ ಅವರನ್ನು ಗೌರವಿಸಲಾಯಿತು.
ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಬಿ. ವಸಂತ ಪೈ ಬದಿಯಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶೇಷವನ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಆಡಳಿತಮೊಕ್ತೇಸರಾದ ಕೆ. ಪಿ. ಬಾಲಸುಬ್ರಹ್ಮಣ್ಯ ಸ್ವಾಗತಿಸಿ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ, ವೇಣು ಗೋಪಾಲ.ಕೆ ವಂದಿಸಿದರು. ಶೇಷವನ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಕಿರಣ್ ಪ್ರಸಾದ್ ಕೂಡ್ಲು ನಿರೂಪಿಸಿದರು.
ಬಳಿಕ ಸಾಮೂಹಿಕ ಪ್ರಾರ್ಥನೆ, ಆಚಾರ್ಯ ವರಣ, ಪುಣ್ಯಾಹ, ಪ್ರಾಸಾದ ಶುದ್ಧಿ, ಅಂಕುರಾರೋಹಣ, ರಕ್ಷೊಘ್ನಹೋಮ, ವಾಸ್ತು ಹೋಮ, ವಾಸ್ತು ಬಲಿ ನಡೆಯಿತು. ಶ್ರೀ ಶಾಸ್ತಾರ ನಾಟ್ಯಾಲಯ, ಸೇಡಿಕಟ್ಟೆ, ನೀಚಾಲು ಇವರಿಂದ ನಾಟ್ಯ ವೈಭವ, ಪೇಟೆ ಶ್ರೀ ವೆಂಕಟ್ರಮಣ ಬಾಲಗೋಕುಲದ ಪುಟಾಣಿಗಳಿಂದ ಯಕ್ಷಗಾನ ನಡೆಯಿತು.