ಮಂಗಳೂರು : ಮಂಗಳೂರು – ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ರ ಅಭಿವೃದ್ದಿಗೆ ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರ ಮನವಿಗೆ ಸ್ಪಂದಿಸಿದ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರು ಒಟ್ಟು ರೂ. 101.13 ಕೋಟಿ ಅನುದಾನವನ್ನು ಬಿಡುಗಡೆ ಮಾಡಿರುತ್ತಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ IV ರ ಅಡಿಯಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಯು ಈ ಕೆಳಗಿನಂತೆ ನಡೆಯಲಿದೆ.
ಕಿ.ಮೀ. 683.00 ಯಿಂದ 693.00 ವರೆಗೆ ರೂ. 28.45 ಕೋಟಿ
ಕಿ.ಮೀ. 693.00 ಯಿಂದ 706.00 ವರೆಗೆ ರೂ. 39.19 ಕೋಟಿ
ರಾಷ್ಟ್ರೀಯ ಹೆದ್ದಾರಿಯ ಅಡ್ಡ ಚರಂಡಿಗಳ ಪುನರ್ನಿರ್ಮಾಣಕ್ಕೆ
ಕಿ.ಮೀ. 590.00 ಯಿಂದ 610.00 ವರೆಗೆ ರೂ. 23.81 ಕೋಟಿ
ಕಿ.ಮೀ. 630.00 ಯಿಂದ 640.00 ವರೆಗೆ ರೂ. 9.71 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ.