ಕಬಕ-ಪುತ್ತೂರು ರೈಲು ನಿಲ್ದಾಣವನ್ನು ಆದರ್ಶ ನಿಲ್ದಾಣವಾಗಿ, ಬೆಂಗಳೂರು ನಿಲ್ದಾಣದ 2/3 ನೇ ಫ್ಲಾಟ್ಫಾರಂನಲ್ಲಿ ಎಸ್ಕಲೇಟರ್ ಸಮರ್ಪಣೆ ಮತ್ತು ಮೈಸೂರು ನಿಲ್ದಾಣದ 1 ಮತ್ತು 6 ನೇ ಫ್ಲಾಟ್ಫಾರಂನಲ್ಲಿ ಎಸ್ಕಲೇಟರ್ಗಳ ಸಮರ್ಪಣೆ ಕಾರ್ಯಕ್ರಮವನ್ನು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಸುರೇಶ್ ಪ್ರಭು ಅವರು ವೀಡಿಯೋ ಲಿಂಕ್ ಮುಖಾಂತರ ದಿನಾಂಕ 5-11-2016 ರಂದು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರಿನ ಶಾಸಕರಾದ ಶ್ರೀಮತಿ ಶಕುಂತಲಾ ಶೆಟ್ಟಿ, ಪುತ್ತೂರು ನಗರಸಭೆ ಅಧ್ಯಕ್ಷರಾದ ಶ್ರೀಮತಿ ಜಯಂತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.