ಕುಪ್ಪೆಪದವಿನ ಕುಳವೂರು ಗೆಂದಡ್ಪು ಸದಾಶಿವ ಪೂಜಾರಿ ಅವರ ಮನೆಯಲ್ಲಿ ಕೆಲ ದಿನಗಳ ಹಿಂದೆ ರಾತ್ರಿ ವೇಳೆಯಲ್ಲಿ ದನಕಳ್ಳರು ಎರಡು ದನಗಳನ್ನು ಕಳವುಗೈದಿದ್ದು ಬಜಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನವೆಂಬರ್ 8 ರಂದು ಎಡಪದವು ಮಂಡಲದ ಅಧ್ಯಕ್ಷರಾದ ಭರತ್ ಶೆಟ್ಟಿಯವರು ಮತ್ತು ಸಂಸದ ನಳಿನ್ ಕುಮಾರ್ ಕಟೀಲ್, ಕೃಷ್ಣ ಜೆ. ಪಾಲೆಮಾರ್ ಹಾಗೂ ಮಂಡಲದ ಪದಾಧಿಕಾರಿಗಳೊಂದಿಗೆ ಸದಾಶಿವ ಪೂಜಾರಿಯವರ ಮನೆಗೆ ತೆರಳಿ ಎರಡು ದನಗಳನ್ನು ದಾನವಾಗಿ ನೀಡಲಾಯಿತು.