Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಬಾಂಜರುಮಲೆ ಮಲೆಕುಡಿಯರ ಕಾಲನಿಯಲ್ಲಿ ನಳಿನ್ ಗ್ರಾಮ ವಾಸ್ತವ್ಯ

ಇದೇ ಮೊದಲ ಬಾರಿ ಸಂಸದರೊಬ್ಬರ ಗ್ರಾಮ ವಾಸ್ತವ್ಯ, ಕಾಲನಿ ನಿವಾಸಿಗಳ ಜೊತೆ ಮುಕ್ತ ಸಂವಾದ, ಸಮಸ್ಯೆಗಳ ಆಲಿಕೆ, ಬೇಡಿಕೆಗಳಿಗೆ ಸ್ಪಂದನೆಯ ಭರವಸೆ

ನೆರಿಯ : ಸುಂದರವಾದ ದೇಶ ಭಾರತದಲ್ಲಿ ಸ್ವಾಮಿ ವಿವೇಕಾನಂದರು ಆದರ್ಶ ರಾಷ್ಟ್ರದ ಕಲ್ಪನೆ ಕೊಟ್ಟಿದ್ದರೆ, ರಾಮರಾಜ್ಯದ ಕಲ್ಪನೆಯನ್ನು ಮಹಾತ್ಮಾ ಗಾಂಧೀಜಿ ಕೊಟ್ಟಿದ್ದಾರೆ. ರಾಮರಾಜ್ಯ ಎಂದರೆ ಇಲ್ಲಿರುವ ಪ್ರತಿ ವ್ಯಕ್ತಿ ರಾಮನಾಗಿ ಮಾರ್ಪಾಟಾಗುವುದು ಮತ್ತು ಹಳ್ಳಿಗಳ ಅಭಿವೃದ್ಧಿಯಾಗುವುದೇ ಆಗಿದೆ. ಆ ನಿಟ್ಟಿನಲ್ಲಿ ಆಲೋಚಿಸುವುದಾದರೆ ಇಲ್ಲಿ ದೆಹಲಿ ನಗರ ಎಷ್ಟು ಅಭಿವೃದ್ಧಿಯಾಗಿದೆ ಎನ್ನುವುದಕ್ಕಿಂತಲೂ ಎಳನೀರು-ಗುತ್ಯಡ್ಕ, ಬಾಂಜಾರು, ಕೋಲೋಡಿ, ಮಾಳಿಗೆಮನೆ ಎಂಬ ಪ್ರದೇಶಗಳು ಎಷ್ಟು ಅಭಿವೃದ್ಧಿ ಹೊಂದುತ್ತದೆ ಎಂಬುದೇ ಮುಖ್ಯವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

1

2

3

4

5

ಮೌಲ್ಯಾಧಾರಿತ ಶಿಕ್ಷಣಕ್ಕೆ ಆಧ್ಯತೆ :
ಮಲೆಕುಡಿಯ ಕಾಲನಿಯ ಮಕ್ಕಳಿಗೆ ಶಿಕ್ಷಣಕ್ಕೆ ಮಾತೃಭೂಮಿ ಸೇವಾ ಪ್ರತಿಷ್ಠಾನ ಮೊದಲ ಆಧ್ಯತೆ ನೀಡಲಿದೆ. ಯುವಜನತೆ ಮದ್ಯ ಮತ್ತು ಇತರ ವ್ಯಸನಗಳಿಗೆ ಗುರಿಯಾಗದಂತೆ ಜಾಗೃತಿ ಮೂಡಿಸಲಾಗುವುದು. ಕೇಸುಗಳಲ್ಲಿ ಸಿಲುಕಿ ತೊಂದರೆಗೊಳಗಾಗದಂತೆಯೂ ಅವರನ್ನು ಎಚ್ಚರಿಸಲಾಗುವುದು. ಆರೋಗ್ಯ ತಪಾಸಣೆಗಾಗಿ ಪ್ರತೀ ೨ ತಿಂಗಳಿಗೊಮ್ಮೆ ವ್ಯವಸ್ಥೆ ಮಾಡಲಾಗುವುದು ಎಂದರು.

ಎಬಿವಿಪಿಯಿಂದ ಕಾಲನಿಯ ಸ್ಥಿತಿ ಗತಿ ಸರ್ವೆ, ಸರಕಾರಕ್ಕೆ ನೀಡಲು ನಿರ್ಧಾರ :
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಈಗಾಗಲೇ ಕಾಲನಿಯ ಎಲ್ಲಾ 43 ಮನೆಗಳಿಗೆ ಭೇಟಿ ನೀಡಿ ಸ್ಥಿತಿ ಗತಿ ಬಗ್ಗೆ ಅಧ್ಯಯನ ನಡೆಸಲಾಗಿದ್ದು ವರದಿ ತಯಾರಿಸಲಾಗಿದೆ. ಅದನ್ನು ಶೀಘ್ರದಲ್ಲೇ ಸರಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ನೀಡಲಾಗುವುದು. ಅದರ ಮೂಲಕ ಆಧ್ಯತೆಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಚಿಂತನೆ ಮಾಡಲಾಗಿದೆ ಎಂದರು.

ಕೇಂದ್ರ ಸರಕಾರದ ಪ್ರಮುಖ ಆಶಯಗಳು :
ಅರಣ್ಯ ಪ್ರದೇಶದಲ್ಲಿ ತಲತಲಾಂತರದಿಂದ ನೆಲೆಸಿರುವ ನಿವಾಸಿಗಳನ್ನು ಎಂದೂ ಒಕ್ಕಲೆಬ್ಬಿಸುವುದಿಲ್ಲ. ನೀರು, ವಿದ್ಯುತ್ ಮತ್ತು ರಸ್ತೆ ಕಾಮಗಾರಿಗೆ ಪ್ರಥಮ ಆಧ್ಯತೆ, ಒಂದು ವೇಳೆ ಮನಸೊಪ್ಪಿ ಅಲ್ಲಿಂದ ಹೊರಬರುವುದಾದರೆ ಅಂತವರಿಗೆ ನ್ಯಾಯಯುತವಾದ ಪ್ಯಾಕೇಜ್ ಕೇಂದ್ರ ಸರಕಾರದ ಆಶಯವಾಗಿದೆ. ತುಳುನಾಡಿನ ಮೂಲ ನಿವಾಸಿಗಳು ಮತ್ತು ಮೂಲ ಸಂಸ್ಕೃತಿಯವರು ಯಾರೆಂದು ಕೇಳಿದರೆ ಅದು ಮಲೆಕುಡಿಯರು.

ಎಚ್‌ಪಿಸಿಎಲ್ ತೆರಿಗೆ ಬಾಕಿ ಬಗ್ಗೆ ದೂರು :
ಈ ಸಂದರ್ಭ ಉಪಸ್ಥಿತರಿದ್ದ ನೆರಿಯ ಗ್ರಾ.ಪಂ. ಸದಸ್ಯರ ನಿಯೋಗ ಸಂಸದರನ್ನು ಭೇಟಿಮಾಡಿ, ಎಚ್‌ಪಿಸಿಎಲ್ ಪೈಪ್‌ಲೈನ್ ಮತ್ತು ಪಂಪುಹೌಸ್‌ಗೆ ಸಂಬಂಧಿಸಿದಂತೆ ಕಂಪೆನಿಯವರು ಪಂಚಾಯತ್‌ಗೆ ತೆರಿಗೆ ಕಟ್ಟಿಲ್ಲ. ಕೇಳಿದರೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ದೂರಿದಾಗ, ಕಂಪೆನಿಯವರನ್ನೂ ಮಂಗಳೂರಿನ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗುವುದು ಅಂದು ನಿಮಗೂ ತಿಳಿಸಲಾಗುವುದು ಎಂದು ಸಂಸದರು ಭರವಸೆ ನೀಡಿದರು.

ಸಂಸದರ ಕಾರ್ಯಕ್ರಮದಲ್ಲಿ ಯಾರ್‍ಯಾರು ಭಾಗವಹಿಸಿದ್ದರು?
ಸಂಸದರ ಈ ಗ್ರಾಮ ವಾಸ್ತವ್ಯದ ಕಾರ್ಯಕ್ರಮದ ಪ್ರಧಾನ ಪ್ರಾಯೋಜಕತ್ವವನ್ನು ಮಾತೃಭೂಮಿ ಸೇವಾ ಪ್ರತಿಷ್ಠಾನ ನೆರಿಯ ಚಾರ್ಮಾಡಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನ ಬಾಂಜಾರು ವಹಿಸಿತ್ತು. ವೇದಿಕೆಯಲ್ಲಿ ನಡೆದ ಸಭೆಯಲ್ಲಿ ಮಾತೃಭೂಮಿ ಸೇವಾ ಪ್ರತಿಷ್ಠಾನದ ಸಂಚಾಲಕ ಕೆ.ಟಿ. ಸುವರ್ಣ ಉಪಸ್ಥಿತರಿದ್ದರು. ಊರವರ ಪರವಾಗಿ ಬೆಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ಬಿ.ಎನ್. ವೆಂಕಟೇಶ್, ಊರ ಹಿರಿಯರಾದ ರಾಜು ಉಪಸ್ಥಿತರಿದ್ದರೆ, ಸಂಸದರ ಜೊತೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ.ಮೋನಪ್ಪ ಭಂಡಾರಿ ಕೂಡ ವೇದಿಕೆಯಲ್ಲಿ ಆಸೀನರಾಗಿದ್ದರು.

ಮಂಗಳೂರು ಶ್ರೀ ಗೋಕರ್ಣಾಥೇಶ್ವರ ಕಾಲೇಜಿನ ಉಪನ್ಯಾಸಕರಾಗಿರುವ ಕೇಶವ ಬಂಗೇರ ಸಭಾ ಕಾರ್ಯಕ್ರಮ ಸಂಯೋಜಿಸಿದರು. ಈ ಸಂದರ್ಭದಲ್ಲಿ ಗಣ್ಯರಾದ ಭಾಸ್ಕರ ದೇವಸ್ಯ, ಬಿಜೆಪಿ ತಾಲೂಕು ಅಧ್ಯಕ್ಷ ರಂಜನ್ ಜಿ. ಗೌಡ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಸಹಕಾರಿ ಧುರೀಣ ಅನಂತ ರಾವ್ ಚಾರ್ಮಾಡಿ, ಪ್ರಕಾಶ್ ನಾರಾಯಣ್ ರಾವ್ ಚಾರ್ಮಾಡಿ, ಉಮೇಶ್ ಕುಮಾರ್ ಚಾರ್ಮಾಡಿ, ತಾ.ಪಂ. ಸದಸ್ಯರಾದ ಕೊರಗಪ್ಪ ಗೌಡ ಅರಣೆಪಾದೆ ಮತ್ತು ಸುಧೀರ್ ಆರ್. ಸುವರ್ಣ, ಎ.ಪಿ.ಎಂ.ಸಿ. ನಿರ್ದೇಶಕ ಭರತ್ ಕುಮಾರ್, ಬಿಜೆಪಿ ತಾಲೂಕು ಪ್ರ. ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಯುವಮೋರ್ಚಾದ ಕಾರ್ಯದರ್ಶಿ ರಕ್ಷಿತ್ ಶೆಟ್ಟಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಕಾರ್ಯದರ್ಶಿ ಸಿ ಮೋನು, ನೆರಿಯ ಗ್ರಾ.ಪಂ. ಸದಸ್ಯರಾದ ಮೀನಾಕ್ಷಿ ಬಾಂಜಾರು, ಕುಶಾಲ, ಇಬ್ರಾಹಿಂ, ವಸಂತಿ, ಬಾಬು ಗೌಡ ಪರ್ಪಳ, ಶಾಂತಾ, ವರ್ಗೀಸ್, ಚಾರ್ಮಾಡಿ ಗ್ರಾ.ಪಂ. ಸದಸ್ಯರಾದ ಗೋಪಾಲಕೃಷ್ಣ, ವಿನೋದಾ, ಕೇಶವತಿ, ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಎಪಿಎಂಸಿ ಉಪಾಧ್ಯಕ್ಷ ಲಕ್ಷ್ಮಣ, ಕೇಶವ, ಸುಧಾಕರ, ದಯಾನಂದ, ದೇವಸ್ಯ, ಪುಷ್ಪಾ, ಮಡಂತ್ಯಾರು ಗ್ರಾ.ಪಂ. ಮಾಜಿ ಅಧ್ಯಕ್ಷ ವಿಶ್ವನಾಥ ಪೂಜಾರಿ, ಗುತ್ತಿಗೆದಾರ ರಾಜ್‌ಪ್ರಕಾಶ್ ಮದ್ದಡ್ಕ, ಕೃಷ್ಣ ರಾವ್ ಚಾರ್ಮಾಡಿ, ಬಾಂಜಾರು ನಿವಾಸಿಗಳಾದ ಶಶಿ, ಗಣೇಶ್, ಸಚಿನ್, ಸುಚಿ, ಮಾತೃಭೂಮಿ ಸೇವಾ ಪ್ರತಿಷ್ಠಾನದ ಪೈಕಿ ಮುರಳೀಧರ, ಮಹಾವೀರ ಜೈನ್, ನಂದ ಕುಮಾರ್ ಪುಂಜಾಲಕಟ್ಟೆ, ಗಣೇಶ್, ನವೀನ್ ಬಾಂಜಾರು, ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ನಿವೀನ್ ನೆರಿಯ, ಮೊದಲಾದವರು ಉಪಸ್ಥಿತರಿದ್ದು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.

  • ಮುಂದಿನ ಹಂತದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳನ್ನು ಬಾಂಜಾರಿಗೇ ಕರೆಸಿ ಅಭಿವೃದ್ಧಿ ಚಿಂತನಾ ಸಭೆ.
  • ಐಟಿಡಿಪಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖ ಸ್ಥಳದಲ್ಲೇ ಬೇಡಿಕೆ ಪರಿಹಾರಕ್ಕೆ ಕ್ರಮ.
  • ರಸ್ತೆ, ವಿದ್ಯುತ್, ಹಕ್ಕುಪತ್ರ, ಮೊಬೈಲ್ ಟವರ್ ನಿರ್ಮಾಣ ಸೇರಿದಂತೆ ಬೇಡಿಕೆಗಳ ಮೊರೆಯನ್ನಿಟ್ಟ ಮಲೆಕುಡಿಯರು.
  • ಅಣಿಯೂರು, ಚಾರ್ಮಾಡಿ, ಕೊಕ್ಕಡ ಇತರ ಪ್ರದೇಶದ ಮಲೆಕುಡಿಯರಿಗೂ ಸಂವಾದಕ್ಕೆ ಅವಕಾಶ.
  • ಜನರ ಜೊತೆ ನೆಲದಲ್ಲೇ ಕುಳಿತು ಸಮಸ್ಯೆ ಆಲಿಸಿ ಮುಕ್ತವಾಗಿ ಬೆರೆತು ಮಾತನಾಡಿದ ಸಂಸದರು.
  • ಎಸ್‌ಡಿಎಂ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಬಳಗವೂ ಕಾರ್ಯಕ್ರಮದಲ್ಲಿ ಭಾಗಿ, ಅನುಭವ ಸ್ವೀಕಾರ
  • ಅಡಿಕೆ ಮರದಿಂದ ಬಿದ್ದು ಸೊಂಟಕ್ಕೆ ತೀವ್ರ ಪೆಟ್ಟು ಬಿದ್ದಿರುವ ಮಹೇಶ್ ಶರ್ವಾನಿ ಪತಿ ಪುತ್ರಿ ಅಶ್ವಿನಿ ಅವರ ಹೆಸರಿನಲ್ಲಿ ಶೈಕ್ಷಣಿಕ ಉದ್ಧೇಶಕ್ಕೆ ಮಾತೃಭೂಮಿ ಸಹಕಾರಿ ಸಂಘದಲ್ಲಿ ಠೇವಣಿ ಇರಿಸಿದ ಬಾಂಡ್ ಸಂಸದರಿಂದ ಹಸ್ತಾಂತರ.
  • ಕಾರ್ಯಕ್ರಮದಲ್ಲಿ 43 ಕುಟುಂಬಗಳ 130 ಕ್ಕೂ ಅಧಿಕ ಮಂದಿ ವೃದ್ಧರೂ ಸೇರಿದಂತೆ ಮಹಿಳೆಯರು ಮತ್ತು ಮಹನೀಯರು.
  • ನೆರಿಯ ಕಾಟಾಜೆಯ ದೌರ್ಜನ್ಯಕ್ಕೊಳಗಾದ ಸುಂದರ ಮಲೆಕುಡಿಯ ಅವರೂ ಭಾಗಿಯಾಗಿ ಪರಿಹಾರಕ್ಕಾಗಿ ಸಂಸದರಿಗೆ ಮನವಿ.
  • ಮಾಶಾಸನವೂ ಸಿಗುತ್ತಿಲ್ಲ ಎಂಬುದಾಗಿ ಸಂಸದರ ಗಮನಸೆಳೆದ ಸುಂದರ ಮಲೆಕುಡಿಯ
  • ಮುಂದಿನ ಗ್ರಾಮ ವಾಸ್ತವ್ಯ ಎಳನೀರು, ಗುತ್ಯಡ್ಕ ಪ್ರದೇಶ ಎಂದು ಸಂಸದರು ಆಶ್ವಾಸನೆ ನೀಡಿದರು.
Highslide for Wordpress Plugin