ಸೌದಿ ಅರೇಬಿಯಾದಲ್ಲಿ ಪೇಟಿಂಗ್ ಕೆಲಸಕ್ಕೆಂದು ಹೋಗಿ ಅಲ್ಲಿ ಕುರಿ ಕಾಯುವ ಕೆಲಸಕ್ಕೆ ನೇಮಕವಾಗಿದ್ದ ಮೂಲ್ಕಿ ಕೊಳ್ಳಾಡು ನಿವಾಸಿ ಪುನೀತ್ ಹಾಗೂ ಗಂಜಿಮಠ ನಿವಾಸಿ ದಾಮೋದರ್ ಮೇ 28, ಭಾನುವಾರ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಊರಿಗೆ ಮರಳಿದ್ದಾರೆ. ಅವರು ಸಂಕಷ್ಟದಲ್ಲಿದ್ದಾಗ ಸೌದಿಯಿಂದ ಭಾರತಕ್ಕೆ ವಾಪಾಸು ತರಲು ಸರ್ವ ಪ್ರಯತ್ನ ಮಾಡಿದ ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಅಭಿನಂದನೆ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡದ ಯುವಕರು ವಿದೇಶದಲ್ಲಿ ತೊಂದರೆಗೆ ಸಿಲುಕಿದ್ದಾರೆ ಎಂದು ಗೊತ್ತಾದ ತಕ್ಷಣ ನಳಿನ್ ಕುಮಾರ್ ಕಟೀಲ್ ತಕ್ಷಣ ವಿದೇಶಾಂಗ ಸಚಿವರನ್ನು ಸಂಪಕರ್ಿಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ವೇದವ್ಯಾಸ ಕಾಮತ್ ತಿಳಿಸಿದ್ದಾರೆ.