Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಜಿಲ್ಲೆಯಲ್ಲಿ 48,000 ವಸತಿ ಹೀನರು : ನಳಿನ್ ಕುಮಾರ್ ಕಟೀಲು

ಫರಂಗಿಪೇಟೆ: ದ.ಕ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 48,000 ವಸತಿ ಹೀನರಿದ್ದು ಅವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 2022 ರ ಒಳಗೆ ವಸತಿ ಕಲ್ಪಿಸುವ ಉದ್ವೇಗವನ್ನು ಈಡೇರಿಸುವಲ್ಲಿ ಕೇಂದ್ರಸರಕಾರ ಬಧ್ಧವಾಗಿದೆ

ಕೇಂದ್ರಸರಕಾರದ 78 ವಿವಿಧ ಯೋಜನೆಗಳಿದ್ದು ಅದರ ಬಗ್ಗೆ ಮಾಹಿತಿ ಎಲ್ಲರಿಗೂ ಸಿಗುವಂತಾಗಬೇಕು ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೆ ಮುಟ್ಟಿಸುವ ಕೆಲಸಕ್ಕೆ ಪಕ್ಷದ ಕಾರ್ಯಕರ್ತರು ಕಟಬಧ್ಧರಾಗಬೇಕು. ಎಂದು ಮಂಗಳೂರು ಸಂಸದರು ಗ್ರಾಮ ಭೇಟಿಯ ಸಂದರ್ಭ ಪುದು ಗ್ರಾಮದಲ್ಲಿ ಮಾತನಾಡಿದರು.

nkk-1

ಈ ಸಂದರ್ಭದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರು, ಕ್ಷೇತ್ರದ ಪ್ರಬಾರಿಗಳಾದ ರಾಮಸಂದ್ರ ಬೈಕಂಪಾಡಿ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಕುಂಪಲ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್, ಜಿಲ್ಲಾ ಪಂಚಾಯತ್ ಸದಸ್ಯರಾದ ರವೀಂದ್ರ ಕಂಬಳಿ, ತಾಲೂಕು ಪಂಚಾಯತ್ ಸದಸ್ಯರಾದ ಗಣೇಶ್ ಸುವರ್ಣ, ಎ,ಪಿ.ಎಂ.ಸಿ ಸದಸ್ಯರಾದ ವಿಠಲ್ ಸಾಲ್ಯಾನ್, ಕ್ಷೇತ್ರ ಕಾರ್ಯದರ್ಶಿ ಹರಿಯಪ್ಪ ಸಾಲ್ಯಾನ್, ಉಪಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಸುಜೀರು, ಪುದು ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ, ಧೀರಜ್ ಮಾರಿಪಳ್ಳ, ಮನೋಹರ ಕೊಟ್ಟಾರಿ, ಪ್ರಮೋದ್, ಮತ್ತಿತರರು ಉಪಸ್ಥಿತರಿದ್ದರು.

Highslide for Wordpress Plugin