ಉಳ್ಳಾಲ: ದೇಶದಲ್ಲಿ 12 ಕೋಟಿ ಯುವಕರಿಗೆ ಮುದ್ರಾ ಯೋಜನೆಯಡಿ ಸಾಲ ನೀಡಲಾಗಿದ್ದು, ದ.ಕ. ಜಿಲ್ಲೆಯಲ್ಲಿ 94 ಸಾವಿರ ಯುವಕರಿಗೆ 1,500 ಕೋಟಿ ರೂ. ಸಾಲವನ್ನು ಕೇಂದ್ರ ಸರಕಾರ ನೀಡಿದೆ ಎಂದು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಕುರ್ನಾಡು ಮತ್ತು ಕೊಣಾಜೆ ಶಕ್ತಿ ಕೇಂದ್ರದ ಆಶ್ರಯದಲ್ಲಿ ಮುಡಿಪು ಜಂಕ್ಷನ್ನಲ್ಲಿ ನಡೆದ ರೋಡ್ ಶೋ ಮತ್ತು ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಉಜ್ವಲ ಯೋಜನೆ, 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಆರೋಗ್ಯ ವಿಮೆ, ಆಯುಷ್ಮಾನ್ ಮೋದಿ ಕೇರ್, ಜನಧನ್ ಮೂಲಕ ಜನಪ್ರಿಯ ಯೋಜನೆಗಳನ್ನು ಮೋದಿ ಜಾರಿಗೆ ತಂದರು ಎಂದರು.
ದೇಶದ ಸಾಮರ್ಥ್ಯ ಪ್ರದರ್ಶನ
ಐದು ವರ್ಷದ ಆಡಳಿತದಲ್ಲಿ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವದೆಲ್ಲೆಡೆ ಪಸರಿಸಿದ್ದಾರೆ. ಯುದ್ಧ ಕೈದಿಯನ್ನು ಪಾಕಿಸ್ಥಾನವು 48 ಗಂಟೆಗಳ ಒಳಗೆ ಭಾರತಕ್ಕೆ ಒಪ್ಪಿಸುವಂತೆ ಮಾಡಿದ್ದಾರೆ ಎಂದರು.
ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಚಂದ್ರಹಾಸ್ ಉಳ್ಳಾಲ್, ಧನಲಕ್ಷಿ ಗಟ್ಟಿ, ಸತೀಶ್ ಕುಂಪಲ, ರವಿಂದ್ರ ಶೆಟ್ಟಿ ಉಳಿದೊಟ್ಟು, ನವೀನ್ ಪಾದಲ್ಪಾಡಿ, ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ, ಭಾಸ್ಕರ ದೇವಸ್ಯ, ರವಿಶಂಕರ್ ಕೆ., ಗೋಪಾಲ ಶೆಟ್ಟಿ ಅರಿಬೈಲ್, ಬದರೀನಾಥ ಕಾಮತ್, ಮೋಹನರಾಜ್, ಮನೋಜ್ ಆಚಾರ್ಯ, ಹೇಮಂತ್ ದೇರಳಕಟ್ಟೆ, ರಾಜಾರಾಮ್ ಭಟ್ ಉಪಸ್ಥಿತರಿದ್ದರು.