Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಸಿ.ಪಿ.ಸಿ.ಆರ್.ಐ ನ್ನು ಸ್ಥಳಾಂತರಿಸದಂತೆ ಸಚಿವ ಪ್ರಕಾಶ್ ಜಾವ್ಡೇಕಾರ್ ಅವರಿಗೆ ಸಂಸದರ ಮನವಿ

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ  ಡಿ.ವಿ.ಸದಾನಂದ ಗೌಡ ಹಾಗೂ ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಇವರು ಇಂದು (ಜುಲೈ 18) ಮಾನ್ಯ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪ್ರಕಾಶ್ ಜಾವ್ಡೇಕಾರ್ ಇವರನ್ನು ಭೇಟಿಯಾಗಿ ಕಿದು ಸಿ.ಪಿ.ಸಿ.ಆರ್.ಐ ಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸದೆ ಅಲ್ಲೇ ಮುಂದುವರೆಸಬೇಕು ಮತ್ತು ಈ ಬಗ್ಗೆ ಉಂಟಾಗಿರುವ ಗೊಂದಲದ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿದರು.

ತೆಂಗು, ಕೋಕೋ ಮತ್ತು ಗೇರು ತಳಿಗಳಿಂದ ಉತ್ತಮವಾದ ಬೆಳೆಗಳನ್ನು ಬೆಳೆಯುವ ಉದ್ದೇಶದಿಂದ ಈ ಕೇಂದ್ರವನ್ನು 1972 ರಲ್ಲಿ ಕಿದುನಲ್ಲಿ ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿ.ಪಿ.ಸಿ.ಆರ್.ಐ) ಅಡಿಯಲ್ಲಿ ಸ್ಥಾಪಿಸಲಾಯಿತು. ಈ ಕೇಂದ್ರವನ್ನು ಬೀಜ ಫಾರ್ಮ್ ಆಗಿ ಮಾಡಲಾಯಿತು ಮತ್ತು ನಂತರ ಇದನ್ನು 2001 ರಲ್ಲಿ ಸಂಶೋಧನಾ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಯಿತು. ಈ ಕೇಂದ್ರವು 1972 ರಲ್ಲಿ ಸುಬ್ರಮಣ್ಯದಲ್ಲಿ ತನ್ನ ಕಚೇರಿಯೊಂದಿಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಿತು ನಂತರ ಕರ್ನಾಟಕ ಸರ್ಕಾರದಿಂದ ಗುತ್ತಿಗೆಗೆ 60 ಹೆಕ್ಟೇರ್ ಅರಣ್ಯ ಭೂಮಿಯನ್ನು ಗೇಣಿಗೆ ಪಡೆದುಕೊಂದಿತು. ತರುವಾಯ ಕಚೇರಿಯನ್ನು ಕಿದುವಿಗೆ ಸ್ಥಳಾಂತರಿಸಲಾಯಿತು ಮತ್ತು 1973 ರಲ್ಲಿ ಔಪಚಾರಿಕವಾಗಿ ಉದ್ಘಾಟಿಸಲಾಯಿತು. ಅದೇ ವರ್ಷದಲ್ಲಿ ಹೆಚ್ಚುವಾರಿಯಾಗಿ 60 ಹೆಕ್ಟೇರ್ ಕೃಷಿ ಭೂಮಿಯನ್ನಾಗಿ ವಿಸ್ತರಿಸಲಾಯಿತು. ತೆಂಗು ಜೆನೆಟಿಕ್ ರಿಸೋರ್ಸ್ ನೆಟ್‌ವರ್ಕ್ (COGENT) ಅಡಿಯಲ್ಲಿ ದಕ್ಷಿಣ ಏಷ್ಯಾದ ಅಂತರರಾಷ್ಟ್ರೀಯ ತೆಂಗು ಜೀನ್ ಬ್ಯಾಂಕ್ ಅನ್ನು ಈ ಕೇಂದ್ರದಲ್ಲಿ 1998 ರಲ್ಲಿ ಸ್ಥಾಪಿಸಲಾಯಿತು. ಈ ಕೇಂದ್ರವನ್ನು ಈಗ ಸಿ.ಪಿ.ಸಿ.ಆರ್.ಐ ಸಂಶೋಧನಾ ಕೇಂದ್ರ ಮತ್ತು ದಕ್ಷಿಣ ಏಷ್ಯಾದ ಅಂತರರಾಷ್ಟ್ರೀಯ ತೆಂಗಿನ ಜೀನ್ ಬ್ಯಾಂಕ್ ಎಂದು ಮರುನಾಮಕರಣ ಮಾಡಲಾಗಿದೆ. ಕಿದುವಿನಲ್ಲಿ 453 ತೆಂಗು ಜರ್ಮ್‌ಪ್ಲಾಸಂನಲ್ಲಿ 95 ಪ್ರಬೇಧಗಳಿವೆ (ಭಾರತದ ಹೊರಗಿನಿಂದ). ಕಿದು ಸಂಶೋಧನಾ ಕೇಂದ್ರದ ವ್ಯಾಪ್ತಿಯಲ್ಲಿ 95 ಹೆಕ್ಟೇರ್ ತೆಂಗು, 7.5 ಹೆಕ್ಟೇರ್ ನಲ್ಲಿ ಅಡಿಕೆ ಮತ್ತು 2.5 ಹೆಕ್ಟೇರ್ ನಲ್ಲಿ ಕೊಕೊ ಬೆಳೆ ಬೆಳೆಯಲಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ರೈತ ಗುಂಪುಗಳಿಗೆ ನಿಯಮಿತ ತರಬೇತಿ ನೀಡುವಲ್ಲಿ ಈ ಕೇಂದ್ರವು ಪ್ರಮುಖ ಪಾತ್ರ ವಹಿಸುತ್ತಿದೆ. ವಿವಿಧ ರಾಜ್ಯಗಳ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕೃಷಿ ಸಂಶೋಧನಾ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಸಂಶೋಧಕರು ತಮ್ಮ ಶೈಕ್ಷಣಿಕ ಅವಶ್ಯಕತೆಗಳಿಗಾಗಿ ಈ ಕೇಂದ್ರವನ್ನು ಅವಲಂಬಿಸಿರುತ್ತಾರೆ.

ಕರ್ನಾಟಕ ಸರ್ಕಾರ (ಅರಣ್ಯ ಇಲಾಖೆ)ಯು ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಿದ ಬಾಬ್ತು ರೂ.19,26,77,670 ಕೋಟಿ ಯನ್ನು ಪಾವತಿಸುವಂತೆ ಸಿಪಿಸಿಆರ್‌ಐಗೆ ನಿರ್ದೇಶನ ನೀಡಿರುತ್ತದೆ ಎಂದು ಸಚಿವ  ಡಿ.ವಿ.ಸದಾನಂದ ಗೌಡ ಹಾಗೂ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ವಿವರಣೆ ನೀಡಿದರು.

ಈ ಬಗ್ಗೆ ಸ್ಪಂದಿಸಿದ ಸಚಿವರು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಕಾರ್ಯದರ್ಶಿ  .ಸಿ.ಎಲ್.ಮಿಶ್ರಾ ಇವರನ್ನು ಕಚೇರಿಗೆ ಕರೆಸಿಕೊಂಡು ಕರ್ನಾಟಕ ಅರಣ್ಯ ಇಲಾಖೆಗೆ ಪಾವತಿಲು ಬಾಕಿಯಿರುವ ರೂ.19,26,77,670 ಕೋಟಿಯನ್ನು ಮನ್ನಾ ಮಾಡುವ ಮತ್ತು ಕಿದು ಸಿ.ಪಿ.ಸಿ.ಆರ್.ಐ ಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸದೆ ಅಲ್ಲೇ ಮುಂದುವರೆಸುವಂತೆ ಇಲಾಖೆಯ ಮಹಾನಿರ್ದೇಶಕರ ಮೂಲಕ ತಕ್ಷಣ ಆದೇಶ ಹೊರಡಿಸಲು ಸೂಚಿಸಿದರು.

Highslide for Wordpress Plugin