“ಒಂದು ದೇಶ ಒಂದು ಸಂವಿಧಾನ” 370 ನೇ ವಿಧಿ ರದ್ಧತಿ ಬಗೆಗಿನ ಜನ ಜಾಗರಣ ಸಭೆ ಇಂದು ಮಂಗಳೂರಿನ ಟಿ.ವಿ ರಮಣ ಪೈ ಹಾಲ್ನಲ್ಲಿ ನಡೆಯಿತು. ಮುಖ್ಯ ಭಾಷಣಕಾರರಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಮುರಳೀಧರ್ ರಾವ್ ಭಾಗವಹಿಸಿದರು. ಬಿಜೆಪಿ ರಾಜ್ಯಾಧ್ಯಕ್ಷರೂ ಹಾಗೂ ದಕ್ಷಿಣಕನ್ನಡ ಲೋಕಸಭಾ ಸದಸ್ಯರೂ ಆದ ಶ್ರೀ ನಳಿನ್ ಕುಮಾರ್ ಕಟೀಲ್, ಶಾಸಕರು, ಪಕ್ಷದ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.