ಮಂಗಳೂರು : 2009 ಏಪ್ರಿಲ್ ತಿಂಗಳಲ್ಲಿ ಲೋಕಸಭಾ ಚುಣಾವಣೆ ನಡೆದು 4 ವರ್ಷಗಳು ಪೂರ್ಣಗೊಂಡಿವೆ. ಕಳೆದ 4 ವರ್ಷಗಳಲ್ಲಿ ಸಂಸದರ ಸ್ಥಳೀಯಾಭೀವೃಧ್ದಿ ನಿಧಿ ಹಾಗೂ ಶಿಫಾರಸ್ಸಿನ ಮೇರೆಗೆ ಇದುವರೆಗೆ ರೂಪಾಯಿ 81,20,35,560 ಬಿಡುಗಡೆಯಾಗಿ ಅಭಿವೃದ್ಧಿ, ಶಿಕ್ಷಣ, ಆರೋಗ್ಯ….. ಇತ್ಯಾದಿ ಕಾರ್ಯಗಳಿಗೆ ವಿನಿಯೋಗವಾಗಿದೆ.
ರೈಲ್ವೆ ವಿಭಾಗದ ಕಾಮಗಾರಿ:
ಸಂಸದರ ಮುತುವರ್ಜಿಯಲ್ಲಿ ರೈಲ್ವೇ ವಿಭಾಗಕ್ಕೆ ಸಂಬಂಧಿಸಿದಂತೆ ಆರು ಸಭೆ ನಡೆಸಲಾಗಿದೆ. ಇದರ ಫಲಶ್ರುತಿಯಾಗಿ ಪಡೀಲ್ ಕಳಸೇತುವೆಯ ಕಾಮಗಾರಿಗೆ ಈಗಾಗಲೇ ಅನುಮೋದನೆ ದೊರೆತಿದ್ದು, ರಾಜ್ಯ ಸರಕಾರದ ಪಾಲು ಇಷ್ಟರಲ್ಲೇ ರೈಲ್ವೇ ಇಲಾಖೆಗೆ ಸಂದಾಯವಾಗಿದೆ.
ಜಪ್ಪು ಕುಡುಪಾಡಿ ಮೇಲ್ಸೇತುವೆಯ ಬಗ್ಗೆ ಸಂಬಂಧ ಪಟ್ಟವರಿಗೆ ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಲಾಗಿದೆ. ಇತರ 6 ರೈಲ್ವೇಗಳ ಓಡಾಟಕ್ಕೆ ನಡೆಸಿದ ಪ್ರಯತ್ನ ಫಲ ನೀಡಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಮತ್ತು ದುರಸ್ತಿ:
ಎನ್.ಎಚ್. 48 ಶಿರಾಡಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ಕಷ್ಟವಾದಾಗ ರಾಜ್ಯ ಸರಕಾರವನ್ನು ಒತ್ತಾಯಿಸಿ ರೂ. 6.68 ಕೋಟಿ ಅನುದಾನ ತಂದು ರಾಷ್ಟ್ರೀಯ ಹೆದ್ದಾರಿಯ ದುರಸ್ತಿಕಾರ್ಯ ಕೈಗೊಳ್ಳಲಾಗಿದೆ.
ರಾಷ್ಟ್ರೀಯ ಹೆದ್ದಾರಿ 13. ಬೆಳವಾಯಿಯಿಂದ ಮಂಗಳೂರಿನವರೆಗೆ ಹಾಗೂ ರಾಷ್ಟ್ರೀಯ ಹೆದ್ದಾರಿ 234 ಕೊಟ್ಟಿಗೆ ಹಾರದಿಂದ ಬಿ.ಸಿ.ರೋಡ್ ವರೆಗೆ ರಸ್ತೆ ಅಭಿವೃದ್ದಿಗೆ 35.37ಕೋಟಿ ರೂಪಾಯಿ ಮಂಜುರಾಗಿ ಕಾಮಗಾರಿ ಮುಕ್ತಾಯ ಹಂತ ತಲುಪಿದೆ.
ಕೇಂದ್ರ ಸರಕಾರದ ಪೈಲೆಟ್ ಪ್ರೊಜೆಕ್ಟ್ ಸ್ಕೀಮ್ ಫೇಸ್ ನಂ. 9 ರಸ್ತೆ ಅಭಿವೃದ್ದಿ ಕಾಮಗಾರಿಗೆ ಮಂಗಳೂರು ತಾಲೂಕಿನ ಮೂಡುಬಿದ್ರೆ ವಿಧಾನಸಭಾಕ್ಷೇತ್ರದ ಪೆರ್ನಂಕಿಲ ಮತ್ತು ಶಾಂತಿನಗರ 5.4 ಕಿ.ಮೀ. ರಸ್ತೆ ಅಭಿವೃದ್ದಿಗೆ 2 ಕೋಟಿ 63 ಲಕ್ಷ 45 ಸಾವಿರ ರೂಪಾಯಿಗಳು ಬಿಡುಗಡೆಯಾಗಿ ಕೈಗೊಂಡ ಕಾಮಗಾರಿ ಪೂರ್ಣಗೊಂಡಿದೆ.
ಮಳೆಯಿಂದ ಹಾನಿಗೊಂಡ ರಸ್ತೆಗಳ ದುರಸ್ತಿ ಹಾಗೂ ಅಭಿವೃದ್ದಿಗೆ ರಾಜ್ಯ ಸರಕಾರ ಸಂಸದರ ಆಗ್ರಹದ ಮೇರೆಗೆ 1 ಕೋಟಿ 57 ಲಕ್ಷ 50 ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು ಕೈಗೊಂಡ ಕಾಮಗಾರಿ ಪೂರ್ಣಗೊಂಡಿದೆ.
ಮುಖ್ಯಮಂತ್ರಿ ವಿಶೇಷ ಅನುದಾನ:
ಗ್ರಾಮೀಣ ರಸ್ತೆಗಳು ತೀರಾ ಹದಗೆಟ್ಟಿರುವುದನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು. ಸಂಸದ ಶಿಫಾರಸಿನ ಮೇರೆಗೆ 5 ಕೋಟಿ 69 ಲಕ್ಷ ರೂಪಾಯಿಗಳನ್ನು ಬಿಡುಗಡೆಯಾಗಿ ವಾಹನ ಓಡಾಟಕ್ಕೆ ಮುಕ್ತವಾಗಿದೆ.
ಸಂಸದರ ಸ್ಥಳೀಯಾಭಿವೃದ್ದಿ ನಿಧಿ ಬಿಡುಗಡೆ:
ಸಂಸದರ ಸ್ಥಳೀಯಾಭಿವೃದ್ಧಿ ನಿಧಿಯಿಂದ ಲೋಕಸಭಾ ಕ್ಷೇತ್ರಕ್ಕೆ 12 ಕೋಟಿ 53 ಲಕ್ಷ 40 ಸಾವಿರ ರೂಪಾಯಿಗಳು ಬಿಡುಗಡೆಯಾಗಿದ್ದು ಅದನ್ನು ಕ್ಷೇತ್ರಾ ಸಮಿತಿಯ ಬೇಡಿಕೆಯಂತೆ ಆದ್ಯತೆಯ ಮೇರೆಗೆ ಎಂಟು ವಿಧಾನ ಸಭಾ ಕ್ಷೇತ್ರಗಳಿಗೆ ಹಂಚಲಾಗಿದೆ. (ವಿಧಾನ ಸಭಾ ಕ್ಷೇತ್ರವಾರು ಅನುದಾನದ ಪಟ್ಟಿಯನ್ನು ಲಗತ್ತಿಸಿದೆ.)
ಎಂ.ಆರ್.ಪಿ.ಎಲ್ ಮತ್ತು ಕೆ.ಐ.ಒ.ಸಿ.ಎಲ್ ನಿಧಿ:
ಲೋಕಸಭಾ ಸದಸ್ಯರ ಮನವಿಯ ಮೇರೆಗೆ ಎಂ.ಆರ್.ಪಿ.ಎಲ್. 1 ಕೋಟಿ 25 ಲಕ್ಷ ರೂಪಾಯಿ ನೀಡಿದ್ದು, ಗ್ರಾಮೀಣ ಪ್ರದೇಶಗಳ ಶಾಲೆ ಹಾಗೂ ರಸ್ತೆಗಳಿಗೆ ನೀಡಲಾಗಿದೆ.
ಕೆ.ಐ.ಒ.ಸಿ.ಎಲ್ ರೂ 8 ಲಕ್ಷ ನೀಡಿದ್ದು ಅದನ್ನು ಶಾಲೆಗಳಿಗೆ ಕುಡಿಯುವ ನೀರಿನ ಸೌಕರ್ಯಕ್ಕಾಗಿ ವಿನಿಯೋಗಿಸಲಾಗಿದೆ.
ಪ್ರಧಾನಮಂತ್ರಿ ಪರಿಹಾರ ನಿಧಿ:
ಸಂಸದರ ಶಿಫಾರಸ್ಸಿನ ಮೇರೆಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ 92 ಲಕ್ಷ 78 ಸಾವಿರ 560 ರೂಪಾಯಿ ಬಿಡುಗಡೆಯಾಗಿದ್ದು, ಕ್ಯಾನ್ಸರ್, ಕಿಡ್ನಿ, ಹೃದ್ರೋಗ ಚಿಕಿತ್ಸೆಗಾಗಿ ಒಳರೋಗಿಗಳಿಗೆ ನೀಡಲಾಗಿದೆ.
ಮುಖ್ಯಮಂತ್ರಿ ಪರಿಹಾರ ನಿಧಿ:
ಸಂಸದರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 22 ಲಕ್ಷ 25 ಸಾವಿರ ರೂಪಾಯಿ ಬಿಡುಗಡೆಯಾಗಿದ್ದು, ಸ್ಥಳೀಯರ ಆಗ್ರಹದ ಮೇರೆಗೆ ಒಳರೋಗಿಗಳ ಚಿಕಿತ್ಸೆಗೆ ನೆರವು ನೀಡಲಾಗಿದೆ.
ದೇವಸ್ಥಾನ ಹಾಗೂ ಮಸೀದಿಗಳಿಗೆ ಅನುದಾನ :
ಸುಮಾರು 100 ಕ್ಕೂ ಹೆಚ್ಚು ದೇವಸ್ಥಾನಗಳಿಗೆ ರೂ. 9 ಕೋಟಿಗೂ ಅಧಿಕ ಮೊತ್ತ ಬಿಡುಗಡೆಯಾಗಿದ್ದು ಆದ್ಯತೆಯ ಮೇರೆಗೆ ವಿವಿಧ ದೇವಸ್ಥಾನಗಳಿಗೆ ನೀಡಲಾಗಿದೆ.
49 ಕ್ಕೂ ಹೆಚ್ಚು ಮಸೀದಿಗಳಿಗೆ ರೂ 36 ಲಕ್ಷ ಬಿಡುಗಡೆಯಾಗಿದ್ದು, ಆದ್ಯತೆಯ ಮೇರೆಗೆ ವಿವಿಧ ಮಸೀದಿಗಳಿಗೆ ನೀಡಲಾಗಿದೆ.
ತುಳು ಭಾಷೆಗೆ ಮಾನ್ಯತೆ:
ತುಳು ಭಾಷೆಯ ಮಾನ್ಯತೆ ಅಭಿವೃದ್ದಿ ಹಾಗೂ ತುಳುಭಾಷೆಯ ಸ್ಥಾನಮಾನಕ್ಕಾಗಿ 8ನೇ ಪರಿಚ್ಛೇದದಲ್ಲಿ ಸೇರಿಸಲು ಆಗ್ರಹಿಸಿ, ವಿಷಯವನ್ನು ಮಂಡಿಸಲಾಗಿದೆ.
ಬಿ.ಎಸ್.ಎನ್.ಎಲ್.ಟವರ್ಸ್:
ಬಿ.ಎಸ್.ಎನ್.ಎಲ್. ಅಧಿಕಾರಿಗಳ ಜೊತೆ ನಿರಂತರ ತ್ರೈಮಾಸಿಕ ಸಭೆ ನಡೆಸಲಾಗಿದೆ. ಸಂಸದರು 20 ಟವರ್ಸ್‌ಗಳಿಗಾಗಿ ಆಗ್ರಹಿಸಿದ್ದು, ಈಗಾಗಲೇ 12 ಟವರ್ಸ್‌ಗಳು ಮಂಜೂರಾಗಿ 6 ಟವರ್ಸ್‌ಗಳು ಕಾರ್ಯರಂಭಗೊಂಡಿದೆ. 6 ಟವರ್ಸ್‌ಗಳು ನಿರ್ಮಾಣ ಹಂತದಲ್ಲಿವೆ. 9 ಟವರ್ಸ್‌ಗಳಿಗಾಗಿ ಸ್ಥಳಾನ್ವೇಷಣೆ ನಡೆದಿದೆ. ಪಾರ್ಲಿಮೆಂಟಿನಲ್ಲಿ 160 ಪ್ರಶ್ನೆಗಳನ್ನು ಕೇಳಿದ್ದು, 7 ಚರ್ಚೆಗಳಲ್ಲಿ ಪಾಲ್ಗೊಳ್ಳಲಾಗಿದೆ.ಕ್ಷೇತ್ರದಲ್ಲಿ ಅತಿಹೆಚ್ಚು ಓಡಾಟ, ಕಾರ್ಯಕರ್ತರ ಭೇಟಿ, ಗ್ರಾಮ ವಾಸ್ತವ್ಯ ಮಾಡಲಾಗಿದೆ.