ಕರಾವಳಿ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಭೂಕುಸಿತ ಉಂಟಾಗುವ ಸಂಭವವಿದ್ದು ಆದ್ದರಿಂದ ಮಳೆಗಾಲದಲ್ಲಿ ಸಕ್ಲೇಶ್ಪುರ ಮತ್ತು ಸುಬ್ರಹ್ಮಣ್ಯ ರೈಲು ಮಾರ್ಗದ ಧೋನಿಗಲ್ ಘಾಟ್ ಪ್ರದೇಶದಲ್ಲಿ ರಾತ್ರಿ ಹೊತ್ತು ಗೂಡ್ಸ್ ಸಂಚಾರವನ್ನು ಸ್ಥಗಿತಗೊಳಿಸುವಂತೆ ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ರೈಲ್ವೇ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕಳೆದ ದಶಕಗಳಿಂದ ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಅನೇಕ ಬಾರಿ ಭೂಕುಸಿತ ಸಂಭವಿಸಿದ್ದು ಬ್ಲಾಕ್ ಉಂಟಾಗಿ ಪ್ಯಾಸೆಂಜರ್ ರೈಲು ನಿಲುಗಡೆಯಾಗಿತ್ತು. ಇಂತಹ ತೊಂದರೆಗಳು ಪ್ರಯಾಣಿಕರಿಗೆ ಇನ್ನುಮುಂದೆ ಉಂಟಾಗದಂತೆ ನೋಡಿಕೊಳ್ಳಲು ಗೂಡ್ಸ್ ರೈಲುಗಳ ಪ್ರಯಾಣವನ್ನು ಸಂಜೆ 6ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಅಲ್ಲದೇ ರಾತ್ರಿವೇಳೆಯಲ್ಲಿ ಹಾಗೂ ಮುಂಜಾನೆ ಸರಿಯಾದ ಟ್ರ್ಯಾಕ್ ಬೀಟ್ ಅಳವಡಿಸುವಂತೆಯೂ ಅವರು ತಿಳಿಸಿದ್ದಾರೆ.