Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಮೋದಿಯವರ ಕನಸಿನ ಶ್ರೇಷ್ಠ ಭಾರತ ನಿರ್ಮಾಣವಾಗಲಿದೆ – ನಳಿನ್

ಬೆಳ್ತಂಗಡಿ: ಚುನಾವಣೆ ಸಮಯ ಅನೇಕ ಟೀಕೆ, ದ್ವೇಷದ ರಾಜಕೀಯದ ನಡುವೆ ಕಾರ್ಯಕರ್ತರ ಶ್ರಮದಿಂದ ಜಿಲ್ಲೆಯಲ್ಲಿ ಬಿಜೆಪಿ ವಿಜಯ ಸಾಧಿಸಿದೆ. ದೇಶದಲ್ಲಿ ಪರಿವರ್ತನೆಯ ಗಾಳಿ ಬೀಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಶ್ರೇಷ್ಠ ಭಾರತ ನಿರ್ಮಾಣವಾಗಲಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.

ಅವರು ಬಿಜೆಪಿ ಗ್ರಾಮ ಸಮಿತಿ ಧರ್ಮಸ್ಥಳ ಇದರ ನೇತೃತ್ವದಲ್ಲಿ ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್‌ನ ಸಭಾಂಗಣದಲ್ಲಿ 18-6-2014 ರಂದು  ಜರುಗಿದ ಅಭಿನಂದನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ದ.ಕ ಜಿಲ್ಲೆಯನ್ನು ಅಭಿವೃದ್ಧಿಯಲ್ಲಿ ದೇಶದಲ್ಲೇ ನಂಬರ್ ಒಂದನೇ ಸ್ಥಾನಕ್ಕೆ ತರುವುದು ನನ್ನ ಮೊದಲ ಗುರಿಯಾಗಿದೆ ಎಂದರು.

ಜಗತ್ತಿನಲ್ಲಿ ಭಾರತವನ್ನು ಬಲಿಷ್ಠ ಸ್ವಾಭಿಮಾನಿ ರಾಷ್ಟ್ರವನ್ನಾಗಿ ಕಟ್ಟಲು ಪ್ರಧಾನಿ ಮೋದಿಯವರ ಕೈ ಬಲಪಡಿಸಲು ನನಗೆ ಮತ ನೀಡಿ ಗೆಲ್ಲಿಸಿದ್ದೀರಿ ಈ ಗೆಲುವು ಪಕ್ಷದ ಕಾರ್ಯಕರ್ತರ ಗೆಲುವು, ಬಿಜೆಪಿಯ ವಿಚಾರಧಾರೆಯ ಗೆಲುವು ಎಂದು ನುಡಿದರು.

ಕಸ್ತೂರಿರಂಗನ್ ವರದಿಯಿಂದಾಗುವ ಸಮಸ್ಯೆಗಳ ಕುರಿತು ಈಗಾಗಲೇ ಕೇಂದ್ರ ಸಚಿವ ಜಾವೇಡ್‌ಕರ್ ಅವರ ಗಮನಕ್ಕೆ ತಂದಿದ್ದೇವೆ. ಜನವಿರೋಧಿ ಯೋಜನೆ ಯಾವುದೂ ಜಾರಿ ಮಾಡುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ. ಅಲ್ಲದೆ ಎತ್ತಿನ ಹೊಳೆ ಯೋಜನೆ ಸೇರಿದಂತೆ ಜಿಲ್ಲೆಯನ್ನು ನಾಶ ಮಾಡುವ ಯಾವುದೇ ಯೋಜನೆಯನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದು ಷೋಷಿಸಿದರು.

ಅಡಿಕೆ ನಿಷೇಧಕುರಿತು ಹಿಂದಿನ ಸರಕಾರ ಸಲ್ಲಿಸಿದ್ದ ಅಫಿದಾವತ್‌ನ್ನು ಹಿಂತೆಗೆದುಕೊಳ್ಳುವ ಕುರಿತು ಪ್ರಧಾನಿಯವರನ್ನು ನಿಯೋಗದಜೊತೆ ಭೇಟಿ ಮಾಡಿಒತ್ತಾಯಿಸುವುದಾಗಿ ಈ ಸಂದರ್ಭಅವರು ತಿಳಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಅವರು ಮಾತನಾಡಿ, ದೇಶದ ಪ್ರಧಾನಿಯಾಗಿ ಮೋದಿಯವರು ಅಧಿಕಾರ ಸ್ವೀಕರಿಸಿದ ಸನ್ನಿವೇಶಗಳು ಜನಪರ ಕೆಲಸ ಮಾಡುವ ಪ್ರಧಾನಿಯ ಸಂಕೇತಗಳಾಗಿವೆ, ಒಳ್ಳೆಯ ದಿನ ಬರಬೇಕಾದರೆ ಕಷ್ಟದ ದಿನಗಳನ್ನು ಅನುಭವಿಸಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಸ್ಥಳ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ರಘು ಚಂದ್ರರಾವ್ ವಹಿಸಿ, ಕಳೆದ 65 ವರ್ಷಗಳ ಕಾಂಗ್ರೆಸ್ ಆಡಳಿತದಿಂದ ರೋಸಿ ಹೋದ ಬಿಜೆಪಿ ಕಾರ್ಯಕರ್ತರಿಗೆ ಈ ಬಾರಿ ನೆಮ್ಮದಿಯಾಗಿದೆ, ಒಳ್ಳೆಯ ಅವಕಾಶ ಸಿಕ್ಕಿದೆ ಎಂದು ತಿಳಿಸಿ ಪುದುವೆಟ್ಟು ಸೇತುವೆ, ಕಲ್ಮಂಜ, ಪುದುವೆಟ್ಟು, ಮುಲಿಕ್ಕಾರು ರಸ್ತೆ ಬೇಡಿಕೆಯನ್ನು ಸಂಸದರ ಮುಂದಿಟ್ಟರು.

ವೇದಿಕೆಯಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿ ಮಂಡಲ ಅಧ್ಯಕ್ಷ ಬಾಲಕೃಷ್ಣ ವಿ.ಶೆಟ್ಟಿ, ತಾ.ಪಂ ಅಧ್ಯಕ್ಷೆ ಜಯಂತಿ ಪಾಲೇದು, ಉಪಾಧ್ಯಕ್ಷ ವಿಷ್ಣು ಮರಾಠೆ, ಬಿಜೆಪಿ ಜಿಲ್ಲಾ ಯುವ ಮೊರ್ಛಾ ಅಧ್ಯಕ್ಷ ರಂಜನ್‌ಜಿ.ಗೌಡ, ಜಿಲ್ಲಾ ಉಪಾಧ್ಯಕ್ಷೆ ಶಾರದಾ ಆರ್.ರೈ, ಜಿ.ಪಂ ಸದಸ್ಯೆ ಧನಲಕ್ಷ್ಮೀ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯರಾದ ಸುಗುಣ, ಕೇಶವ ಎಂ, ಮುಖಂಡರಾದ ಭಾಸ್ಕರ್ ಡಿ., ಪದ್ಮನಾಭಅರ್ಕಜೆ, ಸತೀಶ್‌ರಾವ್, ರತ್ನವರ್ಮಜೈನ್, ಅಚ್ಚುತ ಪೂಜಾರಿ, ಬಾಲಕೃಷ್ಣ ಶೆಟ್ಟಿಕೊಲ್ಪೆ, ಹೊನ್ನಯ್ಯ ಶೆಟ್ಟಿ, ದಿನೇಶ್‌ರಾವ್, ಆದರ್ಶಕನ್ಯಾಡಿ, ರಕ್ಷಿತ್ ಭಂಡಾರಿ, ಹರಿದಾಸಗಾಂಭೀರ, ಪದ್ಮಾವತಿಆರ್.ರಾವ್ ಉಪಸ್ಥಿತರಿದ್ದರು.

ಸ್ಥಾಯಿ ಸಮಿತಿ ಪ್ರಧಾನ ಕಾರ್ಯದರ್ಶಿ ನೀಲಕಂಠ ಸ್ವಾಗತಿಸಿದರು.ಶ್ರೀನಿವಾಸ ರಾವ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Highslide for Wordpress Plugin