Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಇತರರಿಗೆ ನವೋದಯ ಯುವಕ ಸಂಘ ಮಾದರಿಯಾಗಿದೆ – ನಳೀನ್

ಬಂಟ್ವಾಳ: ಇಲ್ಲಿನ ಪರಿಸರದ ಜನರಿಗೆ ಸಾಮಾಜಿಕ ಸೌಕರ್‍ಯಗಳನ್ನು ಒದಗಿಸುವ ಮೂಲಕ ರಾಮರಾಜ್ಯ ನಿರ್ಮಾಣ ಕಾರ್ಯದ ಕೆಲಸವನ್ನು ಪ್ರಚಾರವಿಲ್ಲದೆ ನವೋದಯ ಯುವಕ ಸಂಘ ಕೆಲಸ ಮಾಡುತ್ತಿದೆ ಇದು ಜಿಲ್ಲೆಗೆ ಮಾದರಿಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ನವೋದಯ ಯುವಕ ಸಂಘ(ರಿ). ಮೈರಾನ್‌ಪಾದೆ ಕಾಮಾಜೆ ಇದರ ರಜತ ಮಹೋತ್ಸವ ಅಂಗವಾಗಿ ನೆಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಯುವ ಸಂಘಟನೆಯ ಮೂಲಕ ಜನಸೇವೆಗೆ ಪಾತ್ರರಾಗಿರುವ ಸಂಘ ಜನಪರ ಹೋರಾಟದಲ್ಲೂ ಇತರರಿಗೆ ಮಾದರಿಯಾಗಿದೆ ಎಂದರು.

1

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ| ಪ್ರಭಾಕರ ಭಟ್ ಮಾತನಾಡಿ ಧರ್ಮ ಮತ್ತು ದೇಶವನ್ನು ಉಳಿಸುವ ಕೆಲಸದಲ್ಲಿ ನವೋದಯ ಯುವಕ ಸಂಘ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರವುದು ಶ್ಲಾಘನೀಯ ಎಂದರು. ಗುರು ಹಿರಿಯರ ಸಂಸ್ಕಾರದ ದಾರಿಯಲ್ಲಿ ಮುನ್ನಡೆತ್ತಿರುವುದು ಮತ್ತು ಸ್ವಾಭಿಮಾನದ ಬದುಕಿನ ದೃಷ್ಟಿಕೋನವನ್ನು ಮುಂದಿಟ್ಟುಕೊಂಡು ಕೆಲಸ ಮಾತ್ತರುವದೇ ಈ ಸಂಘ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು.

ವೇದಿಕೆಯಲ್ಲಿ ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ತುಳು ಅಕಾಡೆಮಿ ಸದಸ್ಯ ದಯಾನಂದ ಕತ್ತಲ್‌ಸಾರ್, ಪುರಸಭಾ ಸದಸ್ಯ ಗೋವಿಂದ ಪ್ರಭು, ಜಿ.ಪಂ.ಸದಸ್ಯ ಸಂತೋಷ್ ಕುಮಾರ್ ರೈ ಮತ್ತು ನವೋದಯ ಯುವಕ ಸಂಘ(ರಿ). ಮೈರಾನ್‌ಪಾದೆ ಕಾಮಾಜೆ ಇದರ ಅಧ್ಯಕ್ಷ ಭಾಸ್ಕರ ಟೈಲರ್ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿದ ಅಜ್ಜಿಬೆಟ್ಟು ಪ್ರೌಡ ಶಾಲೆಯ ವಿದ್ಯಾರ್ಥಿನಿ ಕು| ದೀಪ್ತಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಉಮೇಶ್ ಕಾಮಾಜೆ ಪ್ರಸ್ತಾವಿಸಿ, ಸಂಘದ ಸದಸ್ಯ ರತೀಶ್ ಮೈರಾನ್‌ಪಾದೆ ಸ್ವಾಗತಿಸಿ, ಸುದೀರ್ ಕಾಮಾಜೆ ವಂದಿಸಿದರು. ಪುರುಷೋತ್ತಮ ಕೊಯಿಲ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin