Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

Fundamental worksಮೂಲಭೂತ ಕಾರ್ಯ

ಮನುಷ್ಯನು ಕಾರ್ಯಕ್ಷೇತ್ರದಲ್ಲಿ ಹೆಜ್ಜೆ ಇಟ್ಟಾಗ ತೊಂದರೆಗಳು ಬಂದೆರಗುತ್ತವೆ ಹಾಗೂ ಅವನನ್ನು ಪಥಭ್ರಷ್ಟಗೊಳಿಸಲು ಪ್ರಯತ್ನಿಸುತ್ತವೆ. ಪಥಭ್ರಷ್ಟತೆಯ ಉದಾಹರಣೆಯನ್ನು ಹುಡುಕುತ್ತಾ ಬಹುದೂರ ಸಾಗುವ ಅಗತ್ಯವಿಲ್ಲ. ದೊಡ್ಡ ದೊಡ್ಡ ಸಿದ್ಧಾಂತಗಳನ್ನು  ಕಣ್ಣೆದುರಿಗೆ ಇರಿಸಿ, ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾ ಹಾಗೂ ಲಭಿಸುವ ಎಲ್ಲ ಸಾಧನಗಳನ್ನು ಉಪಯೋಗಿಸಿ ಮಾಡುವ ಯಾವ ಕಾರ್ಯಗಳ ಬಗ್ಗೆ ನಮ್ಮ ದೇಶದಲ್ಲಿ ಡಂಗುರ ಬಾರಿಸಲಾಯಿತೋ, ಅದನ್ನು ಮಾಡುವ ಸಾಮಾನ್ಯ ವ್ಯಕ್ತಿಗಳ ಪಾಡು ನಾವು ಇಂದು ನೋಡುತ್ತಲೇ ಇದ್ದೇವೆ.

ಎಲ್ಲರೂ ಒಂದಲ್ಲ ಒಂದು ಸ್ವಾರ್ಥಕ್ಕೆ ಬಲಿಯಾಗಿ ಪಥಭ್ರಷ್ಟರಾಗಿದ್ದಾರೆ. ನಿಜವಾದ ದೇಶಭಕ್ತಿಯಿಂದ ಕಾರ್ಯಮಾಡುವವರು ಬಹಳ ವಿರಳ. ಸಾಮಾನ್ಯ ಸಮಾಜವು ಸ್ವಾರ್ಥವನ್ನು ಬಿಟ್ಟು ದೇಶ ಅಥವಾ ರಾಷ್ಟ್ರದ ವಿಚಾರವನ್ನು ಕೂಡಾ ಮಾಡುವುದಿಲ್ಲ. ಈ ಉದಾಹರಣೆಗಳಿಂದ ತಿಳಿಯುವುದೇನೆಂದರೆ, ಯಾವ ಪದ್ಧತಿಯಿಂದ ಅವಶ್ಯಕವಿರುವ ವೈಯಕ್ತಿಕ ಗುಣಗಳ ವಿಕಾಸವಾಗುತ್ತದೋ, ಆ ಪದ್ಧತಿಯಂತೆ ಕಾರ್ಯವಾಗದಿದ್ದಾಗ, ಸಮಾಜದ ರಚನೆಯನ್ನು ಯೋಗ್ಯ ರೀತಿಯಲ್ಲಿ ಮಾಡುವುದು ಅಸಾಧ್ಯವಾಗುತ್ತದೆ. ಎಲ್ಲ ರೀತಿಯ ತೊಂದರೆಗಳನ್ನು ಪ್ರತ್ಯೇಕವಾಗಿಟ್ಟು, ವ್ಯಕ್ತಿಯ ಗುಣಗಳನ್ನು ವಿಕಾಸ ಮಾಡುವ ಯೋಜನೆಯು ನಮ್ಮ  ಕಾರ್ಯಪದ್ಧತಿ ಬಿಟ್ಟು ಅನ್ಯತ್ರ ಇಲ್ಲ ಎಂದು ನಮ್ಮ ಪ್ರಯತ್ನಗಳ ಬಗ್ಗೆ ಚಿಂತನೆ ನಡೆಸಿದಾಗ ಕಂಡು ಬರುತ್ತದೆ. ನಮ್ಮ ಭಾರತವರ್ಷದಲ್ಲಿ ಪ್ರಚಲಿತ  ಧಾರ್ಮಿಕ ವಿಚಾರದಲ್ಲಿ ಒಂದು ವಿಶೇಷವಿದೆ. ಅದು ಏನೆಂದರೆ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಬೇಕಾದರೆ ಮನುಷ್ಯನು ಕೌಟುಂಬಿಕ ಬಂಧನಗಳನ್ನು ತ್ಯಜಿಸಬೇಕಾಗುತ್ತದೆ. ಎಲ್ಲ ವಿಷಯಗಳಿಂದ ವಿಮುಖನಾಗಿ, ಸನ್ಯಾಸಿಯಾಗಿ, ಈಶ್ವರ ಜ್ಞಾನವನ್ನು ಪಡೆಯಬೇಕು. ಇದರ ಬಗ್ಗೆ ಅನೇಕರು ಚಿಂತನೆ ನಡೆಸಿದ್ದಾರೆ. ಅವರ ಹೇಳಿಕೆ ಏನೆಂದರೆ, ಸಂಸಾರದಲ್ಲಿದ್ದುಕೊಂಡು ಕೂಡಾ ವಿರಕ್ತನಾಗಿರುವುದೇ ನಿಜವಾದ ಶೂರತನ ಮತ್ತು  ಶ್ರೇಷ್ಠತೆ. ನಮ್ಮ ಸಂಸಾರಾಸಕ್ತಿಯನ್ನು ಅಡಗಿಸಲು, ಸಂಸಾರ ತ್ಯಜಿಸುವುದನ್ನು  ಹೇಡಿತನ ಎನ್ನುತ್ತಾರೆ ಅವರು. ಅವರ ವಾದವು ಹೊರಗಿನಿಂದ ಭಾರೀ ಆಕರ್ಷಣೀಯವಾಗಿದೆ. ಈ ಆಕರ್ಷಣೆಯ ಮಾತುಗಳಲ್ಲಿ ಸೀದಾ-ಸಾದಾ ಮನುಷ್ಯರು ಬಲಿಯಾಗುತ್ತಾರೆ ಮತ್ತು ಸಂಸಾರವನ್ನು ತ್ಯಜಿಸಿ ಮೋಕ್ಷಪ್ರಾಪ್ತಿಯ ಪ್ರಯತ್ನದಲ್ಲಿ ಯಾವ ಪುರುಷಾರ್ಥವಿದೆ ಎಂದು ಅವರಿಗೂ ಅನಿಸಲು ಆರಂಭವಾಗುತ್ತದೆ. ಸಂಸಾರದ ಮಾಯಾಮೋಹವು ಕಣ್ಣೆದುರಿದ್ದೂ, ಅದರಿಂದ ಮನಸ್ಸಿನ ಮೇಲೆ ಯಾವುದೇ ಪ್ರಭಾವವಾಗದಂತೆ ಇರುವುದೇ ಪರಮ ಶ್ರೇಷ್ಠತೆ ಎಂದೂ ಹೇಳುತ್ತಾರೆ.

ನಮ್ಮ  ಕಾರ್ಯದ ಬಗ್ಗೆಯೂ ಇದೇ ರೀತಿಯ ಕಲ್ಪನೆ ಇದೆ. ಗುಣ ವಿಕಾಸವಾಗುವಿಕೆಯು ನಿಂತುಬಿಟ್ಟು, ರಾಷ್ಟ್ರಭಕ್ತಿಯ ಭಾವನೆಗೆ ಅಡ್ಡಿ ತರುವ ಸ್ವಾರ್ಥ, ಅಹಂಕಾರ, ವೈಯಕ್ತಿಕ ಮಾನಾಪಮಾನ, ಅಧಿಕಾರ ದಾಹ ಮುಂತಾದ ದುರ್ಗುಣಗಳು ನಿರ್ಮಾಣವಾಗುವಂಥಹ ಕಾರ್ಯಪದ್ಧತಿಯನ್ನು ಗ್ರಹಣ ಮಾಡಿಕೊಂಡು, ದುರ್ಗುಣಗಳು ನಮ್ಮನ್ನು ಸ್ಪರ್ಶಿಸದಂತೆ ನಮ್ಮ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂಬ ಕಲ್ಪನೆಯೇ ರೋಚಕವಾಗಿದೆ. ಈ ದುರ್ಗುಣಗಳಿಗೆ ಅವಕಾಶ ನೀಡದೆ ಬೇರೆ ಬೇರೆ ವಿಚಾರಗಳನ್ನು ಸ್ವೀಕರಿಸಿ ಕಾರ್ಯಗಳನ್ನು ಸ್ವೀಕರಿಸುತ್ತಾ ಮುಂದುವರಿಯುವುದರಲ್ಲಿ ದೊಡ್ಡತನವಿಲ್ಲವೆ? ಇದರಲ್ಲಿಯೂ ದೊಡ್ಡತನವಿದೆ ಎನ್ನುವ ವಿಚಾರವೇ ನಮಗೆ ಸಂತೋಷ ನೀಡುತ್ತದೆ. ಈ ವಿಚಾರದ ಜತೆ ಹೊಂದಾಣಿಕೆಯಾಗುವ ಇನ್ನೊಂದು ರೂಪವೂ ಅನೇಕರ ಮನಸ್ಸಿನಲ್ಲಿ ಬರುತ್ತದೆ. ಅಂದರೆ ಈ ರೀತಿಯಲ್ಲಿ ಕಾರ್ಯಮಾಡಿ ನಾವು ಒಂದು ರೀತಿಯಲ್ಲಿ ಕರ್ತವ್ಯವನ್ನು ಮಾಡುತ್ತಿದ್ದೇವೆ. ಸಮಾಜಸೇವೆ ಮಾಡುತ್ತಿದ್ದೇವೆ. ಜನರ ಕಷ್ಟಗಳನ್ನು ನಾವು ದೂರ ಮಾಡುತ್ತಿದ್ದೇವೆ ಎಂಬ ಕಲ್ಪನೆಯು ಒಂದು ಪ್ರಕಾರದಲ್ಲಿ ಮನಸ್ಸಿಗೆ ಹಿತ ನೀಡುತ್ತದೆ.

ಆದರೆ ಈ ಆಕರ್ಷಣೆಯ ನಿಜರೂಪವನ್ನು ನಾವು ತಿಳಿದುಕೊಳ್ಳಬೇಕು. ಇಲ್ಲವಾದರೆ ಅನ್ಯರ ಕಾರ್ಯಕ್ಷೇತ್ರದಲ್ಲಾದ ದುರ್ದೆಸೆ ನಮಗೂ ಬರುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಬೇರೆ ಯಾವುದೇ ಪದ್ಧತಿಯಲ್ಲಿ ಕಾರ್ಯಮಾಡಿದರೆ, ಬೇರೆಯವರಿಗೆ ದುರ್ಗುಣಗಳು ಅಂಟಿಕೊಂಡಂತೆ, ನಮಗೆ ಅಂಟಲು ಸಾಧ್ಯವೇ ಇಲ್ಲ ಎನ್ನುವುದು ಕೂಡಾ ಸರಿಯಲ್ಲ. ಇಲ್ಲಿ ಅಹಂಕಾರವಿದೆ. ಏಕೆಂದರೆ ಕಾರ್ಯಮಾಡುವ ಮೊದಲು ಅನ್ಯ ಜನರಲ್ಲಿ ಗುಣಗಳಿರಲಿಲ್ಲ. ಆದ್ದರಿಂದ ಕೆಟ್ಟ  ಪ್ರವೃತ್ತಿಗಳಿಗೆ ಬಲಿಯಾದರು ಎನ್ನುವುದು ಆತ್ಮಶ್ಲಾಘನೆಯಾಗುತ್ತದೆ. ಈ ಭಾವನೆಯು ಅಯೋಗ್ಯವಾದುದು. ಇದು  ತೊಂದರೆಗಳ ವ್ಯೂಹಗಳಲ್ಲಿ ಸಿಕ್ಕಿ ಬೀಳುವ ಮೊದಲನೇ ಮೆಟ್ಟಿಲು. ಆದ್ದರಿಂದ ಶಾಂತವಾಗಿ, ದಕ್ಷತೆಯಿಂದ ಈ ಬಗ್ಗೆ ಚಿಂತನೆ ನಡೆಸಬೇಕು. ಅನಂತರ ಕಾರ್ಯವೂ ಎಲ್ಲಿಯವರೆಗೆ ಒಂದು ಮಟ್ಟದವರೆಗೆ ತಲುಪಿಲ್ಲವೋ, ಅಲ್ಲಿಯವರೆಗೆ, ಆಕರ್ಷಕವೆನಿಸುವ ವಿಚಾರಗಳು ಬಂದರೂ ಸಂಯಮದಿಂದ ಇದ್ದುಕೊಂಡು, ಯಾವ ಕಾರ್ಯವು ನಮ್ಮನ್ನು ವೈಯುಕ್ತಿಕ ದ್ವೇಷದಿಂದ ದೂರವಿರಿಸಿ ರಾಷ್ಟ್ರಚಿಂತನೆಯ ಗುಣವನ್ನು ನೀಡಿದೆಯೋ, ಅದೇ ಕಾರ್ಯವನ್ನು  ವೃದ್ಧಿಸಲು, ಅಖಂಡ ಪ್ರಯತ್ನದಿಂದ ಮುಂದುವರಿಯುವ ಅವಶ್ಯಕತೆ ಇದೆ. ಇದರಲ್ಲಿ ಅರ್ಥವಾಗದಿರುವುದು ಏನೂ ಇಲ್ಲ ಎಂದು ನನ್ನ ಭಾವನೆ.

ಸ್ವಲ್ಪ ವಿಚಾರ ಮಾಡಿದರೆ ಈ ಸತ್ಯವನ್ನು ಅರಿತುಕೊಳ್ಳಬಹುದು. ಸಂಸಾರದಲ್ಲಿದ್ದುಕೊಂಡು, ಮಾಯಾ-ಮೋಹಗಳು ಎದುರಿಗಿದ್ದರೂ, ಅವುಗಳನ್ನು ಸ್ಪರ್ಶಿಸದೆ, ಈಶ್ವರ ಪ್ರಾಪ್ತಿಯ ಯೋಗ್ಯತೆಯನ್ನು ಗಳಿಸುವುದರಲ್ಲೇ ಶ್ರೇಷ್ಠತೆ ಇದೆ ಎಂದು ಜನರು ಹೇಳುತ್ತಾರೆ. ಇದು ಸತ್ಯವೂ ಹೌದು. ಆದರೂ ಇಂತಹ ಎಷ್ಟು ಉದಾಹರಣೆಗಳು  ಸಿಗುತ್ತವೆ? ಭಾರೀ ಅಗೆದರೂ ಒಂದೇ ಒಂದು ಉದಾಹರಣೆ ಬರುತ್ತದೆ. ಸಾಮಾನ್ಯ ಮನುಷ್ಯರಲ್ಲಿ ಅಂತಹ ಉದಾಹರಣೆ ಸಿಗುವುದಿಲ್ಲ. ಎಲ್ಲವೂ ಇದಕ್ಕೆ ವಿರೋಧವಾದ ಉದಾಹರಣೆಗಳೇ ಕಾಣುತ್ತವೆ. ಯಾರು ವರ್ಷಗಟ್ಟಲೆ  ತಪಸ್ಸು ಮಾಡಿದ್ದಾರೋ, ಏಕಾಂತವಾಸವನ್ನು ಸ್ವೀಕರಿಸಿದ್ದಾರೋ, ನಿವೃತ್ತಿಯನ್ನು ಅಭ್ಯಾಸ ಮಾಡಿದ್ದಾರೋ ಅಂಥವರ ಮನಸ್ಸಿನಲ್ಲೂ  ಸಾಂಸಾರಿಕ ಸುಖಗಳು ಎದುರು ಬಂದಾಗ, ಅವರೂ ವಿಚಲಿತರಾಗುತ್ತಾರೆ. ನಮ್ಮ ಕಾರ್ಯದ ಬಗ್ಗೆಯೂ ಹೀಗೇ ವಿಚಾರ ಮಾಡಿದರೆ, ಎಲ್ಲಿಯತನಕ ಕಾರ್ಯಕ್ಕೆ ಸ್ಥಿರತೆ, ದೃಢತೆ ಲಭಿಸುವುದಿಲ್ಲವೋ ಅಲ್ಲಿಯ ತನಕ ಬೇರೆ ಕಾರ್ಯಗಳ ಬಗ್ಗೆ ವಿಚಾರ ಮಾಡುವುದು ಮತ್ತು ನಮಗೆ ದೋಷಗಳೇ ಅಂಟಿಕೊಳ್ಳುವುದಿಲ್ಲ ಎನ್ನುವುದು ತಪ್ಪು.  ನಮ್ಮ ಭಾವನೆಯು ವಸ್ತುಸ್ಥಿತಿಯನ್ನು ಆಧರಿಸಿಲ್ಲ. ಈ ಸತ್ಯಕ್ಕೋಸ್ಕರ ದೂರದ ಸಾಕ್ಷ್ಯದ ಅಗತ್ಯವಿಲ್ಲ.ಮನುಷ್ಯನು ಕಾರ್ಯಕ್ಷೇತ್ರದಲ್ಲಿ ಹೆಜ್ಜೆ ಇಟ್ಟಾಗ ತೊಂದರೆಗಳು ಬಂದೆರಗುತ್ತವೆ ಹಾಗೂ ಅವನನ್ನು ಪಥಭ್ರಷ್ಟಗೊಳಿಸಲು ಪ್ರಯತ್ನಿಸುತ್ತವೆ. ಪಥಭ್ರಷ್ಟತೆಯ ಉದಾಹರಣೆಯನ್ನು ಹುಡುಕುತ್ತಾ ಬಹುದೂರ ಸಾಗುವ ಅಗತ್ಯವಿಲ್ಲ. ದೊಡ್ಡ ದೊಡ್ಡ ಸಿದ್ಧಾಂತಗಳನ್ನು  ಕಣ್ಣೆದುರಿಗೆ ಇರಿಸಿ, ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾ ಹಾಗೂ ಲಭಿಸುವ ಎಲ್ಲ ಸಾಧನಗಳನ್ನು ಉಪಯೋಗಿಸಿ ಮಾಡುವ ಯಾವ ಕಾರ್ಯಗಳ ಬಗ್ಗೆ ನಮ್ಮ ದೇಶದಲ್ಲಿ ಡಂಗುರ ಬಾರಿಸಲಾಯಿತೋ, ಅದನ್ನು ಮಾಡುವ ಸಾಮಾನ್ಯ ವ್ಯಕ್ತಿಗಳ ಪಾಡು ನಾವು ಇಂದು ನೋಡುತ್ತಲೇ ಇದ್ದೇವೆ.

ಎಲ್ಲರೂ ಒಂದಲ್ಲ ಒಂದು ಸ್ವಾರ್ಥಕ್ಕೆ ಬಲಿಯಾಗಿ ಪಥಭ್ರಷ್ಟರಾಗಿದ್ದಾರೆ. ನಿಜವಾದ ದೇಶಭಕ್ತಿಯಿಂದ ಕಾರ್ಯಮಾಡುವವರು ಬಹಳ ವಿರಳ. ಸಾಮಾನ್ಯ ಸಮಾಜವು ಸ್ವಾರ್ಥವನ್ನು ಬಿಟ್ಟು ದೇಶ ಅಥವಾ ರಾಷ್ಟ್ರದ ವಿಚಾರವನ್ನು ಕೂಡಾ ಮಾಡುವುದಿಲ್ಲ. ಈ ಉದಾಹರಣೆಗಳಿಂದ ತಿಳಿಯುವುದೇನೆಂದರೆ, ಯಾವ ಪದ್ಧತಿಯಿಂದ ಅವಶ್ಯಕವಿರುವ ವೈಯಕ್ತಿಕ ಗುಣಗಳ ವಿಕಾಸವಾಗುತ್ತದೋ, ಆ ಪದ್ಧತಿಯಂತೆ ಕಾರ್ಯವಾಗದಿದ್ದಾಗ, ಸಮಾಜದ ರಚನೆಯನ್ನು ಯೋಗ್ಯ ರೀತಿಯಲ್ಲಿ ಮಾಡುವುದು ಅಸಾಧ್ಯವಾಗುತ್ತದೆ. ಎಲ್ಲ ರೀತಿಯ ತೊಂದರೆಗಳನ್ನು ಪ್ರತ್ಯೇಕವಾಗಿಟ್ಟು, ವ್ಯಕ್ತಿಯ ಗುಣಗಳನ್ನು ವಿಕಾಸ ಮಾಡುವ ಯೋಜನೆಯು ನಮ್ಮ  ಕಾರ್ಯಪದ್ಧತಿ ಬಿಟ್ಟು ಅನ್ಯತ್ರ ಇಲ್ಲ ಎಂದು ನಮ್ಮ ಪ್ರಯತ್ನಗಳ ಬಗ್ಗೆ ಚಿಂತನೆ ನಡೆಸಿದಾಗ ಕಂಡು ಬರುತ್ತದೆ. ನಮ್ಮ ಭಾರತವರ್ಷದಲ್ಲಿ ಪ್ರಚಲಿತ  ಧಾರ್ಮಿಕ ವಿಚಾರದಲ್ಲಿ ಒಂದು ವಿಶೇಷವಿದೆ. ಅದು ಏನೆಂದರೆ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಬೇಕಾದರೆ ಮನುಷ್ಯನು ಕೌಟುಂಬಿಕ ಬಂಧನಗಳನ್ನು ತ್ಯಜಿಸಬೇಕಾಗುತ್ತದೆ. ಎಲ್ಲ ವಿಷಯಗಳಿಂದ ವಿಮುಖನಾಗಿ, ಸನ್ಯಾಸಿಯಾಗಿ, ಈಶ್ವರ ಜ್ಞಾನವನ್ನು ಪಡೆಯಬೇಕು. ಇದರ ಬಗ್ಗೆ ಅನೇಕರು ಚಿಂತನೆ ನಡೆಸಿದ್ದಾರೆ. ಅವರ ಹೇಳಿಕೆ ಏನೆಂದರೆ, ಸಂಸಾರದಲ್ಲಿದ್ದುಕೊಂಡು ಕೂಡಾ ವಿರಕ್ತನಾಗಿರುವುದೇ ನಿಜವಾದ ಶೂರತನ ಮತ್ತು  ಶ್ರೇಷ್ಠತೆ. ನಮ್ಮ ಸಂಸಾರಾಸಕ್ತಿಯನ್ನು ಅಡಗಿಸಲು, ಸಂಸಾರ ತ್ಯಜಿಸುವುದನ್ನು  ಹೇಡಿತನ ಎನ್ನುತ್ತಾರೆ ಅವರು. ಅವರ ವಾದವು ಹೊರಗಿನಿಂದ ಭಾರೀ ಆಕರ್ಷಣೀಯವಾಗಿದೆ. ಈ ಆಕರ್ಷಣೆಯ ಮಾತುಗಳಲ್ಲಿ ಸೀದಾ-ಸಾದಾ ಮನುಷ್ಯರು ಬಲಿಯಾಗುತ್ತಾರೆ ಮತ್ತು ಸಂಸಾರವನ್ನು ತ್ಯಜಿಸಿ ಮೋಕ್ಷಪ್ರಾಪ್ತಿಯ ಪ್ರಯತ್ನದಲ್ಲಿ ಯಾವ ಪುರುಷಾರ್ಥವಿದೆ ಎಂದು ಅವರಿಗೂ ಅನಿಸಲು ಆರಂಭವಾಗುತ್ತದೆ. ಸಂಸಾರದ ಮಾಯಾಮೋಹವು ಕಣ್ಣೆದುರಿದ್ದೂ, ಅದರಿಂದ ಮನಸ್ಸಿನ ಮೇಲೆ ಯಾವುದೇ ಪ್ರಭಾವವಾಗದಂತೆ ಇರುವುದೇ ಪರಮ ಶ್ರೇಷ್ಠತೆ ಎಂದೂ ಹೇಳುತ್ತಾರೆ.

ನಮ್ಮ  ಕಾರ್ಯದ ಬಗ್ಗೆಯೂ ಇದೇ ರೀತಿಯ ಕಲ್ಪನೆ ಇದೆ. ಗುಣ ವಿಕಾಸವಾಗುವಿಕೆಯು ನಿಂತುಬಿಟ್ಟು, ರಾಷ್ಟ್ರಭಕ್ತಿಯ ಭಾವನೆಗೆ ಅಡ್ಡಿ ತರುವ ಸ್ವಾರ್ಥ, ಅಹಂಕಾರ, ವೈಯಕ್ತಿಕ ಮಾನಾಪಮಾನ, ಅಧಿಕಾರ ದಾಹ ಮುಂತಾದ ದುರ್ಗುಣಗಳು ನಿರ್ಮಾಣವಾಗುವಂಥಹ ಕಾರ್ಯಪದ್ಧತಿಯನ್ನು ಗ್ರಹಣ ಮಾಡಿಕೊಂಡು, ದುರ್ಗುಣಗಳು ನಮ್ಮನ್ನು ಸ್ಪರ್ಶಿಸದಂತೆ ನಮ್ಮ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂಬ ಕಲ್ಪನೆಯೇ ರೋಚಕವಾಗಿದೆ. ಈ ದುರ್ಗುಣಗಳಿಗೆ ಅವಕಾಶ ನೀಡದೆ ಬೇರೆ ಬೇರೆ ವಿಚಾರಗಳನ್ನು ಸ್ವೀಕರಿಸಿ ಕಾರ್ಯಗಳನ್ನು ಸ್ವೀಕರಿಸುತ್ತಾ ಮುಂದುವರಿಯುವುದರಲ್ಲಿ ದೊಡ್ಡತನವಿಲ್ಲವೆ? ಇದರಲ್ಲಿಯೂ ದೊಡ್ಡತನವಿದೆ ಎನ್ನುವ ವಿಚಾರವೇ ನಮಗೆ ಸಂತೋಷ ನೀಡುತ್ತದೆ. ಈ ವಿಚಾರದ ಜತೆ ಹೊಂದಾಣಿಕೆಯಾಗುವ ಇನ್ನೊಂದು ರೂಪವೂ ಅನೇಕರ ಮನಸ್ಸಿನಲ್ಲಿ ಬರುತ್ತದೆ. ಅಂದರೆ ಈ ರೀತಿಯಲ್ಲಿ ಕಾರ್ಯಮಾಡಿ ನಾವು ಒಂದು ರೀತಿಯಲ್ಲಿ ಕರ್ತವ್ಯವನ್ನು ಮಾಡುತ್ತಿದ್ದೇವೆ. ಸಮಾಜಸೇವೆ ಮಾಡುತ್ತಿದ್ದೇವೆ. ಜನರ ಕಷ್ಟಗಳನ್ನು ನಾವು ದೂರ ಮಾಡುತ್ತಿದ್ದೇವೆ ಎಂಬ ಕಲ್ಪನೆಯು ಒಂದು ಪ್ರಕಾರದಲ್ಲಿ ಮನಸ್ಸಿಗೆ ಹಿತ ನೀಡುತ್ತದೆ.

ಆದರೆ ಈ ಆಕರ್ಷಣೆಯ ನಿಜರೂಪವನ್ನು ನಾವು ತಿಳಿದುಕೊಳ್ಳಬೇಕು. ಇಲ್ಲವಾದರೆ ಅನ್ಯರ ಕಾರ್ಯಕ್ಷೇತ್ರದಲ್ಲಾದ ದುರ್ದೆಸೆ ನಮಗೂ ಬರುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಬೇರೆ ಯಾವುದೇ ಪದ್ಧತಿಯಲ್ಲಿ ಕಾರ್ಯಮಾಡಿದರೆ, ಬೇರೆಯವರಿಗೆ ದುರ್ಗುಣಗಳು ಅಂಟಿಕೊಂಡಂತೆ, ನಮಗೆ ಅಂಟಲು ಸಾಧ್ಯವೇ ಇಲ್ಲ ಎನ್ನುವುದು ಕೂಡಾ ಸರಿಯಲ್ಲ. ಇಲ್ಲಿ ಅಹಂಕಾರವಿದೆ. ಏಕೆಂದರೆ ಕಾರ್ಯಮಾಡುವ ಮೊದಲು ಅನ್ಯ ಜನರಲ್ಲಿ ಗುಣಗಳಿರಲಿಲ್ಲ. ಆದ್ದರಿಂದ ಕೆಟ್ಟ  ಪ್ರವೃತ್ತಿಗಳಿಗೆ ಬಲಿಯಾದರು ಎನ್ನುವುದು ಆತ್ಮಶ್ಲಾಘನೆಯಾಗುತ್ತದೆ. ಈ ಭಾವನೆಯು ಅಯೋಗ್ಯವಾದುದು. ಇದು  ತೊಂದರೆಗಳ ವ್ಯೂಹಗಳಲ್ಲಿ ಸಿಕ್ಕಿ ಬೀಳುವ ಮೊದಲನೇ ಮೆಟ್ಟಿಲು. ಆದ್ದರಿಂದ ಶಾಂತವಾಗಿ, ದಕ್ಷತೆಯಿಂದ ಈ ಬಗ್ಗೆ ಚಿಂತನೆ ನಡೆಸಬೇಕು. ಅನಂತರ ಕಾರ್ಯವೂ ಎಲ್ಲಿಯವರೆಗೆ ಒಂದು ಮಟ್ಟದವರೆಗೆ ತಲುಪಿಲ್ಲವೋ, ಅಲ್ಲಿಯವರೆಗೆ, ಆಕರ್ಷಕವೆನಿಸುವ ವಿಚಾರಗಳು ಬಂದರೂ ಸಂಯಮದಿಂದ ಇದ್ದುಕೊಂಡು, ಯಾವ ಕಾರ್ಯವು ನಮ್ಮನ್ನು ವೈಯುಕ್ತಿಕ ದ್ವೇಷದಿಂದ ದೂರವಿರಿಸಿ ರಾಷ್ಟ್ರಚಿಂತನೆಯ ಗುಣವನ್ನು ನೀಡಿದೆಯೋ, ಅದೇ ಕಾರ್ಯವನ್ನು  ವೃದ್ಧಿಸಲು, ಅಖಂಡ ಪ್ರಯತ್ನದಿಂದ ಮುಂದುವರಿಯುವ ಅವಶ್ಯಕತೆ ಇದೆ. ಇದರಲ್ಲಿ ಅರ್ಥವಾಗದಿರುವುದು ಏನೂ ಇಲ್ಲ ಎಂದು ನನ್ನ ಭಾವನೆ.

ಸ್ವಲ್ಪ ವಿಚಾರ ಮಾಡಿದರೆ ಈ ಸತ್ಯವನ್ನು ಅರಿತುಕೊಳ್ಳಬಹುದು. ಸಂಸಾರದಲ್ಲಿದ್ದುಕೊಂಡು, ಮಾಯಾ-ಮೋಹಗಳು ಎದುರಿಗಿದ್ದರೂ, ಅವುಗಳನ್ನು ಸ್ಪರ್ಶಿಸದೆ, ಈಶ್ವರ ಪ್ರಾಪ್ತಿಯ ಯೋಗ್ಯತೆಯನ್ನು ಗಳಿಸುವುದರಲ್ಲೇ ಶ್ರೇಷ್ಠತೆ ಇದೆ ಎಂದು ಜನರು ಹೇಳುತ್ತಾರೆ. ಇದು ಸತ್ಯವೂ ಹೌದು. ಆದರೂ ಇಂತಹ ಎಷ್ಟು ಉದಾಹರಣೆಗಳು  ಸಿಗುತ್ತವೆ? ಭಾರೀ ಅಗೆದರೂ ಒಂದೇ ಒಂದು ಉದಾಹರಣೆ ಬರುತ್ತದೆ. ಸಾಮಾನ್ಯ ಮನುಷ್ಯರಲ್ಲಿ ಅಂತಹ ಉದಾಹರಣೆ ಸಿಗುವುದಿಲ್ಲ. ಎಲ್ಲವೂ ಇದಕ್ಕೆ ವಿರೋಧವಾದ ಉದಾಹರಣೆಗಳೇ ಕಾಣುತ್ತವೆ. ಯಾರು ವರ್ಷಗಟ್ಟಲೆ  ತಪಸ್ಸು ಮಾಡಿದ್ದಾರೋ, ಏಕಾಂತವಾಸವನ್ನು ಸ್ವೀಕರಿಸಿದ್ದಾರೋ, ನಿವೃತ್ತಿಯನ್ನು ಅಭ್ಯಾಸ ಮಾಡಿದ್ದಾರೋ ಅಂಥವರ ಮನಸ್ಸಿನಲ್ಲೂ  ಸಾಂಸಾರಿಕ ಸುಖಗಳು ಎದುರು ಬಂದಾಗ, ಅವರೂ ವಿಚಲಿತರಾಗುತ್ತಾರೆ. ನಮ್ಮ ಕಾರ್ಯದ ಬಗ್ಗೆಯೂ ಹೀಗೇ ವಿಚಾರ ಮಾಡಿದರೆ, ಎಲ್ಲಿಯತನಕ ಕಾರ್ಯಕ್ಕೆ ಸ್ಥಿರತೆ, ದೃಢತೆ ಲಭಿಸುವುದಿಲ್ಲವೋ ಅಲ್ಲಿಯ ತನಕ ಬೇರೆ ಕಾರ್ಯಗಳ ಬಗ್ಗೆ ವಿಚಾರ ಮಾಡುವುದು ಮತ್ತು ನಮಗೆ ದೋಷಗಳೇ ಅಂಟಿಕೊಳ್ಳುವುದಿಲ್ಲ ಎನ್ನುವುದು ತಪ್ಪು.  ನಮ್ಮ ಭಾವನೆಯು ವಸ್ತುಸ್ಥಿತಿಯನ್ನು ಆಧರಿಸಿಲ್ಲ. ಈ ಸತ್ಯಕ್ಕೋಸ್ಕರ ದೂರದ ಸಾಕ್ಷ್ಯದ ಅಗತ್ಯವಿಲ್ಲ.

Highslide for Wordpress Plugin