ಕೋಲಾರದಲ್ಲಿ 150 ನೇ ಗಾಂಧಿ ಜಯಂತಿ ಪ್ರಯುಕ್ತ ಪಾದಯಾತ್ರೆಯೊಂದಿಗೆ ಜನ ಜಾಗೃತಿ ಕಾರ್ಯಕ್ರಮಕ್ಕೆ ಹಾಗೂ ಜಿಲ್ಲಾ ಪ್ರವಾಸಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲ್ ಅವರಿಗೆ ಕೋಲಾರ ಜಿಲ್ಲೆ ಗಡಿಯಲ್ಲಿ ಭವ್ಯವಾದ ಸ್ವಾಗತವನ್ನು ಕೋರಲಾಯಿತು. ಈ ಸಂದರ್ಭದಲ್ಲಿ ಸಂಸದರಾದ ಮುನಿಸ್ವಾಮಿ, ಕೋಲಾರ ಜಿಲ್ಲಾಧ್ಯಕ್ಷರಾದ ಮುನಿವೆಂಕಟಪ್ಪ, ಮತ್ತು ವಿಧಾನಪರಿಷತ್ ಸದಸ್ಯರಾದ ವೈ ಎ ನಾರಾಯಣಸ್ವಾಮಿ , ವಿಭಾಗ ಪ್ರಭಾರಿ ಗೀತಾ ವಿವೇಕಾನಂದ, ಸಹ ಪ್ರಭಾರಿ ಶಿವಕುಮಾರ್ ಮತ್ತು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಮುಳಬಾಗಿಲಿನ ಇತಿಹಾಸ ಪ್ರಸಿದ್ಧ ಕುರುಡುಮಲೆ ಶ್ರೀ ಮಹಾ ಗಣಪತಿ ದೇವಸ್ಥಾನಕ್ಕೆ ಅಧ್ಯಕ್ಷರು ಭೇಟಿ ನೀಡಿ ದೇವರ ದರ್ಶನ ಪ್ರಸಾದ ಪಡೆದರು. ಜನಜಾಗೃತಿ ಪಾದಯಾತ್ರೆಯಲ್ಲಿ ಭಾಗವಹಿಸಿದರು.