Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ : ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಅಭ್ಯರ್ಥಿಗಳ ಪರ ಮತಯಾಚಿಸಿದರು.

ವಾಮಂಜೂರು ತಿರುವೈಲು ವಾರ್ಡ್ ಬಿಜೆಪಿ ಅಭ್ಯರ್ಥಿ ಶ್ರೀಮತಿ ಹೇಮಲತಾ ರಘು ಸಾಲಿಯಾನ್ ಅವರ ಪರವಾಗಿ, ವಾರ್ಡ್ ನಂಬರ್ 6 ಇಡ್ಯಾ ಪೂರ್ವ ಬಿಜೆಪಿ ಅಭ್ಯರ್ಥಿ ಸರಿತಾ, ವಾರ್ಡ್ ನಂಬರ್ 7 ಇಡ್ಯಾ ಪಶ್ಚಿಮ ಬಿಜೆಪಿ ಅಭ್ಯರ್ಥಿ ನಯನಾ ಕೋಟ್ಯಾನ್, ವಾರ್ಡ್ ನಂಬರ್ 8 ಹೊಸಬೆಟ್ಟು ಬಿಜೆಪಿ ಅಭ್ಯರ್ಥಿ ವರುಣ್ ಚೌಟ ಮತ್ತು ವಾರ್ಡ್ ನಂಬರ್ 10 ಬೈಕಂಪಾಡಿ ಬಿಜೆಪಿ ಅಭ್ಯರ್ಥಿ ಕುಮಾರಿ ಸುಮಿತ್ರಾ ಕರಿಯಾ, ವಾರ್ಡ್ ನಂಬರ್ 16 ಬಂಗ್ರಕೂಳೂರಿನ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಅವರ ಪರ ಮತಯಾಚಿಸಿದರು.

ಬೆಳಗ್ಗೆ ಹೊಸಬೆಟ್ಟು ಮೊಗವೀರ ಕಾರ್ಯಕರ್ತರ ಮನೆಯಲ್ಲಿ ಉಪಹಾರ ಮಾಡಿದರು. ಮಧ್ಯಾಹ್ನ ಕಾನ ದಲಿತ ಕಾರ್ಯರ್ತರ ಮನೆಯಲ್ಲಿ ಭೋಜನವನ್ನು ಮಾಡಿದರು. ಸಂಜೆ ವಾಮಂಜೂರಿನಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಶಾಸಕ ವೈ. ಭರತ್ ಶೆಟ್ಟಿ, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Highslide for Wordpress Plugin