Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಪುತ್ತೂರು ರೂ.5 ಕೋಟಿ ಕಾಮಗಾರಿಗೆ ಶಂಕುಸ್ಥಾಪನೆ, ಚೆಕ್ ವಿತರಣೆ

ಪುತ್ತೂರು; ಪುರಸಭೆಯ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ಒಂದಾಗಿ ಕೆಲಸ ಮಾಡಿದರೆ ಜಿಲ್ಲೆಗೆ ಮಾದರಿಯಾಗುವ ಸುಮದರ ಪುತ್ತೂರನ್ನು ನೀಡಬಹುದಾಗಿದೆ. ನಮ್ಮಲ್ಲಿ ೫೦ ವರ್ಷಗಳ ಹಿಂದಿನ ರಸ್ತೆಗಳು, ೨೦ ವರ್ಷಗಳ ಹಿಂದಿನ ಕುಡಿಯುವ ನೀರಿನ ಯೋಜನೆಗಳು ಇದ್ದು, ಇದನ್ನು ಸರಿಪಡಿಸುವ ಜವಾಬ್ದಾರಿ ಇದೆ. ರಸ್ತೆ ಅಗಲೀಕರಣದ ಜೊತೆಗೆ ಹೊಸ ರಸ್ತೆಗಳ ಆವಶ್ಯಕತೆ ಇದೆ. ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.


ಅವರು ಪುತ್ತೂರು ಪುರಸಭೆಯ ವತಿಯಿಂದ ನಡೆದ ಮುಖ್ಯಮಂತ್ರಿಗಳ ಸಣ್ಣ ಹಾಗೂ ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮ ‘ನಗರೋತ್ಥಾನ’ದ ೨ನೇ ಹಂತದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಎಸ್.ಎಫ್.ಸಿ ಅನುದಾನದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿಸವಲತ್ತು  ವಿತರಿಸಿ ಮತನಾಡಿದರು. ಪುತ್ತೂರಿನಲ್ಲಿಯೂ ಪ್ಲಾಟ್ ಸಂಸ್ಕೃತಿ ಬಂದಿದೆ. ಹಾಗಾಗಿ ಯೋಜನೆಗಳ ಅನುಷ್ಟಾನದಲ್ಲಿ ಮಾಸ್ಟರ್ ಪ್ಲ್ಯಾನ್ ಅಗತ್ಯ ಎಂದರು.

ಓಟಿನ ಸಂದರ್ಭದಲ್ಲಿ ರಾಜಕಾರಣ ಮಾಡೋಣ. ಅಭಿವೃದ್ಧಿಶೀಲ ಕಾರ್ಯಗಳಿಗೆ ರಾಜಕಾರಣ ಮಾಡುವುದಿಲ್ಲ. ಶಕುಂತಳಾ ಶೆಟ್ಟಿಯವರೇ  ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವಾಗ ನಾನೂ ನಿಮ್ಮ ಜೊತೆ ಇರುತ್ತೇನೆ ಎಂದು ನಳಿನ್ ಕುಮಾರ್ ಹೇಳಿದರು.

ಸಭಾಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಸುಂದರನಗರವಾಗಬೇಕು. ಇದಕ್ಕೆ ಸಾರ್ವಜನಿಕರ ತ್ಯಾಗವೂ ಅಗತ್ಯ. ಜನತೆಗೆ ಹೆಚ್ಚಿನ ತೊಂದರೆಯಾಗದಂತೆ ರಸ್ತೆ ಅಗಲೀಕರಣದ ಕೆಲಸ ಮಾಡಬೇಕು. ಪ್ರಗತಿಯ ಜೊತೆಗೆ ಸಮಸ್ಯೆಗಳೂ ಸೃಷ್ಟಿಯಾಗುತ್ತವೆ. ಹಾಗಾಗಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸರಕಾರದ ಅನುದಾನವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭಾ ಅಧ್ಯಕ್ಷರಾದ ವಾಣಿಶ್ರೀಧರ್ ಮಾತನಾಡಿ, ಪುರಸಭೆಯ ವ್ಯಾಪ್ತಿಯಲ್ಲಿ ರಸ್ತೆ,ಚರಂಡಿ ಮೊದಲಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮೊದಲ ಆದ್ಯತೆ ನೀಡಲಾಗುವುದು. ಪುರಸಭಾ ವಿಸ್ತರಿತ ಭಾಗಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು. ಪುರಸಭಾ ಅಭಿವೃದ್ಧಿಗೆ ಇನ್ನಷ್ಟು ಅನುದಾನದ ಅಗತ್ಯವಿದೆ. ಸರಕಾರ ಇದನ್ನು ನೀಡಬೇಕು ಎಂದು ಹೇಳಿದರು.  ಮುಖ್ಯ ಅತಿಥಿಯಾಗಿ ಸಹಾಯಕ ಆಯುಕ್ತರಾದ ಎಚ್.ಕೆ ಕೃಷ್ಣಮೂರ್ತಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಪುರಸಭಾ ಸದಸ್ಯರಾದ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪುರಸಭಾ ಉಪಾಧ್ಯಕ್ಷರಾದ ಜೀವಂಧರ್ ಜೈನ್ ಸ್ವಾಗತಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿಶ್ವನಾಥ ಗೌಡ ಪ್ರಾಸ್ತವಿಕವಾಗಿ ಮಾತನಾಡಿದರು. ಪುರಸಭಾ ಮುಖ್ಯಾಧಿಕಾರಿ ಎಚ್.ಸುಧಾಕರ್ ವಂದಿಸಿದರು. ಪುರಸಭಾ ಸದಸ್ಯ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin