ಯಾದಗಿರಿಯ ವಿದ್ಯಾಮಂಗಳ ಕಾರ್ಯಾಲಯದಲ್ಲಿ ಇಂದು ಜಿಲ್ಲಾ ಬಿಜೆಪಿ ಸಭೆ ಮಾನ್ಯ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಇವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಅರುಣ್ ಕುಮಾರ್, ವಿಭಾಗ ಸಹ ಪ್ರಭಾರಿಗಳಾದ ಈಶ್ವರ್ ಸಿಂಗ್ ಠಾಕೂರ್, ಜಿಲ್ಲಾಧ್ಯಕ್ಷರಾದ ಶ್ರೀ ಚಂದ್ರಶೇಖರ್ ಮಾಗನೂರು, ಸುರಪುರ ಶಾಸಕರು, ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷರಾದ ರಾಜು ಗೌಡರು, ಮಾಜಿ ಸಚಿವರಾದ ಎ ಬಿ ಮಾಲಕರೆಡ್ಡಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.