ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯು ಆಯೋಜಿಸಿದ್ದ ‘ನೇತ್ರಾವತಿ ರಕ್ಷಿಸಿ – ದಕ್ಷಿಣ ಕನ್ನಡ ಉಳಿಸಿ’ ಘೋಷ ವಾಕ್ಯದೊಂದಿಗೆ ನಮ್ಮ ನಡಿಗೆ ಎತ್ತಿನಹೊಳೆಗೆ ಕಾಲ್ನಡಿಗೆ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಕಾರ್ಯಕ್ರಮದ ಯಶಸ್ಸಿನಲ್ಲಿ ಈ ಜಿಲ್ಲೆಯ ಯತಿವರ್ಯರು, ಜನಸಾಮಾನ್ಯರು, ಸಾಮಾಜಿಕ – ಧಾರ್ಮಿಕ ನಾಯಕರು, ವಿವಿಧ ಹೋರಾಟ ಸಮಿತಿಯ ಪ್ರಮುಖರು, ಸಂಘ ಸಂಸ್ಥೆಗಳು, ಮಾಧ್ಯಮದ ಬಂಧುಗಳ ಸಹಕಾರ ಪ್ರಾಮುಖ್ಯವಾದುದು. 4 ದಿನಗಳ ಈ ಕಾಲ್ನಡಿಗೆಯಲ್ಲಿ ಎಲ್ಲರ ಪಾತ್ರವೂ ಅಮೂಲ್ಯವಾದುದು.
ಜಿಲ್ಲೆಯ ಹೋರಾಟಗಳಲ್ಲೇ ಹೊಸ ಇತಿಹಾಸ ಬರೆದ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ನೀಡಿದ ಸಹಕಾರಕ್ಕಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ನೇತ್ರಾವತಿ ರಕ್ಷಿಸೋಣ- ದಕ್ಷಿಣ ಕನ್ನಡ ಉಳಿಸೋಣ. ಜೈ ನೇತ್ರಾವತಿ…..