ನೇತ್ರಾವತಿ ನದಿ ಉಳಿವಿಗಾಗಿ ಎತ್ತಿನಹೊಳೆ ಯೋಜನೆ ವಿರೋಧಿಸಿ 4 ದಿನಗಳ ಪಾದಯಾತ್ರೆ ಅ. 13 ರಂದು ಗುಂಡ್ಯದಲ್ಲಿ ಸಮಾರೋಪಗೊಂಡಿತು.
ಇದೊಂದು ಅವೈಜ್ಞಾನಿಕ ಯೋಜನೆಯಾಗಿದ್ದು ಇದನ್ನು ನಾವು ವಿರೋಧಿಸುತ್ತೇವೆ. ಯೋಜನೆಯನ್ನು ಕೈಬಿಡದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ. ಬಯಲುಸೀಮೆಯ ಜನರಿಗೆ ನೀರು ನೀಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಎತ್ತಿನಹೊಳೆಯನ್ನು ತಿರುಗಿಸಿ ನೀರು ನೀಡುವ ಯೋಜನೆ ಬಿಟ್ಟು, ಪರ್ಯಾಯವಾಗಿ ಚಿಂತಿಸುವುದು ಒಳ್ಳೆಯದು. ನೇತ್ರಾವತಿ ನದಿ ತಿರುವು ಜಿಲ್ಲೆಯ ಅಳಿವು ಉಳಿವಿನ ಪ್ರಶ್ನೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಪಾದಯಾತ್ರೆಯಲ್ಲಿ ಜಿಲ್ಲೆಯ 25,000 ಕ್ಕೂ ಅಧಿಕ ಜನ ಭಾಗವಹಿಸಿದ್ದರು.