ಬಂಟ್ವಾಳ : ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಅವರ ನಿವಾಸಕ್ಕೆ ತೆರಳಿ ಸೌಹಾರ್ದಯುತ ಮಾತುಕತೆ ನಡೆಸಿ, ಈ ಬಾರಿಯ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಇದಕ್ಕೂ ಮೊದಲು ನಳಿನ್ ಕುಮಾರ್ ಕಟೀಲು ಅವರು, ಕೋಟ್ಯಾನ್ ಅವರ ಬೀಡಿ ಫ್ಯಾಕ್ಟರಿಗೂ ಭೇಟಿ ನೀಡಿ ಅಲ್ಲಿಯ ನೌಕರರ ಮತ ಯಾಚಿಸಿದರು.
ಬಳಿಕ ಬಿ.ಸಿ.ರೋಡು ಕಾರ್ಯಾಲಯದಲ್ಲಿ ಕಾರ್ಯಕರ್ತರ ಭೇಟಿಯಾಗಿ ತದನಂತರ ನರಿಕೊಂಬು. ಶಂಭೂರು ಗ್ರಾಮದ ಬರ್ಕೆಗೆ ಭೇಟಿ ನೀಡಿ ಅಲ್ಲಿನ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು. ಬಳಿಕ ಪಣೋಲಿ ಬೈಲಿನ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದರು. ಬೊಳ್ಳಾಯಿ ಮಾರ್ನ ಬೈಲಿನ ಕಾರ್ಯಕರ್ತರೊಂದಿಗೆ ಚರ್ಚಿಸಿ, ಪಾಣೆಮಂಗಳೂರು ವೀರ ವಿಠಲ ದೇವಸ್ಥಾನಕ್ಕೆ ತೆರಳಿ, ಇಲ್ಲಿನ ಹಿರಿಯ ಬಿಜೆಪಿ ಕಾರ್ಯಕರ್ತ ಪಾಂಡುರಂಗ ಪ್ರಭುಗಳ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ನಂತರ ಕಳ್ಳಿಗೆ, ನೆತ್ರಕೆರೆಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಲೋಕಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಎ.ರುಕ್ಮಯ ಪೂಜಾರಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಕ್ಷೇತ್ರ ಸಮಿತಿ ಚುನಾವಣಾ ಪ್ರಮುಖ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ಪಕ್ಷದ ಪ್ರಮುಖರಾದ ಶ್ರೀಕರ ಪ್ರಭು, ದಿನೇಶ್ ಭಂಡಾರಿ, ವಿನಯ ನಾಯಕ್, ಪುರುಷ ಸಾಲಿಯನ್, ಪುಷ್ಪರಾಜ ಶೆಟ್ಟಿ, ಪ್ರಥ್ವಿರಾಜ್, ದೇವಪ್ಪ ಪೂಜಾರಿ, ಆನಂದ ಶಂಭೂರು ಮೊದಲಾದವರು ಉಪಸ್ಥಿತರಿದ್ದರು.