ಎತ್ತಿನಹೊಳೆ ಯೋಜನೆಗೆ ಪರಿಸರ ಪರಿಣಾಮ ಅಧ್ಯಯನದಿಂದ ನೀಡಿರುವ ವಿನಾಯಿತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಿಯೋಗವು ಗುರುವಾರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಈ ಸಂದರ್ಭದಲ್ಲಿ ಸಂಜೀವ ಮಠಂದೂರು, ರಾಮಚಂದ್ರ ಬೈಕಂಪಾಡಿ, ಮತ್ತಿನ್ನಿತರರು ಉಪಸ್ಥಿತರಿದ್ದರು.