ಮಂಗಳೂರಿನ ಪಡೀಲ್ ಬಳಿ ನಡೆಯುತ್ತಿರುವ ರೈಲ್ವೇ ಕೆಳಸೇತುವೆ ಕಾಮಗಾರಿಯನ್ನು ನಳಿನ್ ಕುಮಾರ್ ಕಟೀಲ್ ಇವರು ವೀಕ್ಷಿಸಿದರು. ಕಾಮಗಾರಿಯ ಬೆಳವಣಿಗೆಗಳ ಬಗ್ಗೆ ಮಾಹಿತಿಯನ್ನು ರೈಲ್ವೇ ಇಲಾಖೆಯ ಇಂಜಿನೀಯರ್ಗಳಿಂದ ಪಡೆದುಕೊಂಡರು ಹಾಗೂ ಕಾಮಗಾರಿಯನ್ನು ಶೀಘ್ರ ಹಾಗೂ ಉತ್ತಮ ಗುಣಮಟ್ಟದಲ್ಲಿ ನಡೆಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀಮೋನಪ್ಪ ಭಂಡಾರಿ, ಕಾರ್ಪೊರೇಟರ್ಗಳಾದ ಸುಧೀರ್ ಶೆಟ್ಟಿ, ವಿಜಯಕುಮಾರ್ ಶೆಟ್ಟಿ ಇನ್ನಿತರರ ಹಾಜರಿದ್ದರು.