ಕಾನೂನು ವ್ಯವಸ್ಥೆ ಹದಗೆಟ್ಟಿದೆ, ಸಚಿವರ ಕುಮ್ಮಕ್ಕು ಪ್ರಶಾಂತತ್ ಕೊಲೆಯ ಹಿಂದಿದೆ. ಕೊನೆಯುಸಿರೆಳೆಯುವ ಮುನ್ನ ಪ್ರಶಾಂತ್ ಹೇಳಿಕೆ ನೀಡಿದ್ದರೂ ಅವರನ್ನು ಬಂಧಿಸಲು ವೈಫಲ್ಯವಾಗಿದೆ. ಆರೋಪಿಗಳಿಗೆ ಬೆಂಗಾವಲಾಗಿ ಕೆಲಸ ಮಾಡುತ್ತಿರುವವರು ಹಲವರಿದ್ದಾರೆ. ನೈಜ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ನಂ. ೨೦ ರಂದು ಮಂಗಳೂರಿನಲ್ಲಿ ಪಕ್ಷದ ಪ್ರಮುಖರು ಸೇರಿದಂತೆ ಎಲ್ಲರೂ ಸತ್ಯಾಗ್ರಹ ನಡೆಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಮೂಡಬಿದಿರೆಯ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು. ಈ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲ್, ಪ್ರಹ್ಲಾದ್ ಜೋಶಿ, ಕು. ಶೋಭಾ ಕರಂದ್ಲಾಜೆ, ಕ್ಯಾ. ಗಣೇಶ್ ಕಾರ್ಣಿಕ್, ಉಮಾನಾಥ್ ಕೋಟ್ಯಾನ್, ಜಗದೀಶ ಅಧಿಕಾರಿ, ಮತ್ತಿನ್ನಿತರರು ಉಪಸ್ಥಿತರಿದ್ದರು.